ಭಾರತಕ್ಕೆ ನಿರ್ಭಯಾಳ ಪತ್ರ
ಇಂಡಿಯಾ ನಿನ್ನ ಅಜ್ಞಾನ ನೋಡಿ ದುಃಖ ಪಟ್ಟಿದೀನಿ,ನಿನ್ನ ಕಾನೂನು ನೋಡಿ ಬೇಸತ್ತುಹೋಗಿದಿನಿ, ನಿನ್ನ ಜನರನ್ನ ನೋಡಿ ಭಯಪಟ್ಟಿದೀನಿ, ಈ ಭಯ ಬರೀ ನನ್ನದಷ್ಟೇ ಅಲ್ಲ, ಪ್ರತಿಯೊಬ್ಬ ಭಾರತೀಯ ಯುವತಿಯ ಭಯ. ಕಡೆದಾಗಿ ನಿನಗೊಂದು ಮಾತು ಹೇಳೋದಕ್ಕೆ ಇಷ್ಟಪಡ್ತೀನಿ, ನಿನ್ನ ಮಕ್ಳ ಮೇಲೆ ಇಷ್ಟೆಲ್ಲ ದೌರ್ಜನ್ಯ ನಡೆದಿದೆ,ದಯಮಾಡಿ ಇನ್ನಾದ್ರೂ ಎಚ್ಛೆತ್ಕೋ, ಕಾಲ ಮೀರಿ ಹೋಗಿದೆ ಅಂತ ನನಿಗೆ ಗೊತ್ತು, ಆದ್ರೂ ನೀನು ಎಚ್ಛೆತ್ಕೋತಿಯಾ ಅಂತ ಹೇಳ್ತಿದೀನಿ. ಸ್ವರ್ಗದಲ್ಲಿ already ತುಂಬಾ ಜನರನ್ನ ಕಳ್ಸಿದೀಯಾ ಇಲ್ಲಿ ತುಂಬಾ over crowd ಆದ್ರೆ, ಕೆಲವೊಂದಿಷ್ಟು ಜನರನ್ನ ನಾನು ಭೂಮಿಗೆ ನಿನ್ನ ಮಗಳ ರೂಪದಲ್ಲಿ,ಸೋದರಿ ರೂಪದಲ್ಲಿ, ತಾಯಿ ರೂಪದಲ್ಲಿ ವಾಪಸ್ ಕಳಸ್ತೀನಿ, ಇವರನ್ನಾದ್ರೂ ಚೆನ್ನಾಗಿ ನೋಡ್ಕೋ, ಇಲ್ಲಾ ಅವರು ನಿನ್ನ ಕಣ್ಣೆದುರಿಗೆ ಅತ್ಯಾಚಾರಕ್ಕೊಳಗಾದ್ರೆ ನೀನು ಬದಲಾಗಬೇಕಂತ ಆಗ ನಿನಗರಿವಾಗುತ್ತದೆ.
ಭಾರತಕ್ಕೆ ನಿರ್ಭಯಾಳ ಪತ್ರ Read More »