ನನ್ನ ಪರಿಧಿ

ನನ್ನ ಮೊದಲ ಗಜಲ್

ಕತ್ತಲಾದರೂ ಕಾಯುವೆ ನಾ ನಿನಗಾಗಿ
ಉತ್ತರಕ್ಕಾಗಿ ಹುಡುಕುತ್ತಿರುವೆ ನಾ ನಿನಗಾಗಿ

ಪ್ರೀತಿಯ ಜೇನಹನಿಯ ತಂದಿರುವೆ
ಒಲವಿನ ಬತ್ತಳಿಕೆಯಿಂದ ನಾ ನಿನಗಾಗಿ

ಆಕಾಶದ ಚುಕ್ಕಿಯ ಎಣಿಸುತ ಕಾಲಕಳೆದೆ
ಆ ನೀರವ ರಾತ್ರಿಯಲಿ ನಾ ನಿನಗಾಗಿ

ಮರೆತುಹೋದ ನೆನಪು ಮರಳಿ ಬಂದು
ಬಳಲುತಿರುವೆ ನಾ ನಿನಗಾಗಿ

ಬಂದು ಸೇರಿಕೊ ಎನ್ನ, ಸುಧೆಯ
ಹರಿಸಲು ಕಾಯುತಿರುವೆ ನಾ ನಿನಗಾಗಿ

ಸುಶಿ