ಬಯಕೆಗಳ ಪುನರ್ಜೀವ
ಬಯಕೆಗಳ ಹೊತ್ತು
ಬಾನಾಡಿಯಲ್ಲಿ ಬೆಳ್ಳಕ್ಕಿಯಾಗಿ
ಹಾರುತಲಿರುವೆ
ಕಾಣಲೊಲ್ಲದು ಎಲ್ಲೂ
ಹಸಿರೆಲೆ ಕಾಡು-ಮೇಡು
ವಿರಮಿಸಲು ಕೆಲಹೊತ್ತು
ಬಯಕೆಗಳ ಮೂಟೆಯ
ಅಲ್ಲೇ ಬಿಸುಟಾಗ
ಕಂಡಿತೊಂದು ಮಾಯಾನಗರಿ ದೂರದಲ್ಲಿ
ಪುಳಕಗೊಂಡ ಮನದಿ ಹತ್ತಿರ ಸುಳಿದಾಗ
ನಿಂತಿದ್ದೆ ನಾನು
ಬರಡು ಭುವಿಯಲ್ಲಿ!
ಆದರೂ ಛಲ ಬಿಡದೆ ಎದ್ದು ನಿಂತೆ ನಾ
ಕಾಣದ ಹಸಿರೆಲೆಯ ಅರಸಿ ಮತ್ತೆ ನಿಂದು
ಕಣ್ಣ ತುಂಬ ಕನಸಾ ಹೊತ್ತು
ನನ್ನೆಲ್ಲಾ ಶಕ್ತಿಯ ಮೀರಿ ಮತ್ತೆ ಮೇಲೇರಿದೆ ನಾ
ಬಾನಾಡಿಯ ಬೆಳ್ಳಕ್ಕಿಯಾಗಿ ಹರ್ಷದಿ ಚೀರಿದೆ
ಜಗತ್ತನ್ನು ಗೆಲ್ಲುವ ಛಲದ ಮೂಟೆ ಹೊತ್ತು
ಬಿಸುಟೆ ಮಿಕ್ಕೆಲ್ಲಾ ಗಮ್ಮತ್ತು

