Submission 26793

ಅವನಿಯ ಧಮನಿ

ರಚನೆ : ಮಮತಾ ಭಟ್ ಸಿದ್ದಕಟ್ಟೆ

----------------------------------

ಬರಿದಾಗಿದೆ ಇಂದು ಭೂಮಿತಾಯ ಮಡಿಲು ಕಾಡುಗಳ ಕಡಿದು ಭವನವ ಕಟ್ಟಲು ಶುದ್ಧ ಗಾಳಿಯು ಎಲ್ಲೆಡೆ ಸಿಗದೆ ಇರಲು ಎಲ್ಲದಕು ಕಾರಣ ಪ್ರಗತಿಯ ಮಜಲು ಕೆಲವು ಕಡೆ ಒಣಗಿದೆ ಭೂಮಿಯ ಭಾಗ ಜರಿಯುವನು ರೈತ ನೆನೆದು ತನ್ನ ಯೋಗ ಅತಿಯಾಯ್ತು ವರುಣನ ಆರ್ಭಟದ ವೇಗ ಕೊಚ್ಚಿ ಹೋದವು ಮನೆಗಳೆಲ್ಲವು ಸರಾಗ ಅವನಿಯ ಧಮನಿಯಲಿ ಇರಲಿ ಶಾಂತ ನಾವೆಲ್ಲರೂ ಹರಿಸೋಣ ಅದರತ್ತ ಚಿತ್ತ ಕಡಿಯುವ ಮುನ್ನ ನೆಡಬೇಕು ಒಂದು ಗಿಡ ಆಗ ತುಂಬುವುದು ಎಲ್ಲೆಡೆ ಹಸಿರು ನೋಡ ತಂಪಾಗಬೇಕಿದೆ ವಸುಂಧರೆಯ ಒಡಲು ಮುಂದಿನ ಪೀಳಿಗೆಗೆ ವರವಾಗಿ ಕೊಡಲು

----------------------------------

ನೋಂದಣಿ ಐಡಿ : KPF-S1-7132

0
Total Votes
6
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!