ಹೆಣ್ಣನ್ನು ಗೌರವಿಸಿ, ಹೆಣ್ಣನ್ನು ರಕ್ಷಿಸಿ!!
ರಚನೆ : ಪ್ರತೀಕ್ಷಾ ಚಂದ್ರಕಾಂತ ಕುಮಟಾ
----------------------------------
ಹೆಣ್ಣನ್ನು ಗೌರವಿಸಿ, ಹೆಣ್ಣನ್ನು ರಕ್ಷಿಸಿ!!. ನಡು ಬೀದಿಯಲ್ಲಿ ತಿಂದು ಬಿಸಾಡಬೇಡಿ ಹೆಣ್ಣೆಂದು ತಿನ್ನುವ ಮುನ್ನ ಯೋಚಿಸಿ ಅವಳು ಒಂದು ಮನೆಯ ನಂದಾ ದೀಪವೆಂದು!!! ತಿಂದಾದ ಮೇಲೆ ನ್ಯಾಯ ಕೇಳಲು ಕೋರ್ಟು ಕಛೇರಿ ಗಳಿಲ್ಲ ನಮ್ಮಲ್ಲಿ ಎಲ್ಲ ಅಧಿಕಾರಿಗಳಿದ್ದು ಸತ್ತಂತಿರುವರು ಏನೂ ತಿಳಿಯದ ರೀತಿಯಲ್ಲಿ... ಅತ್ಯಾಚಾರ ಮಾಡುವ ಮುನ್ನ ಯೋಚಿಸಿ ನನ್ನ ಮನೆಯಲ್ಲೂ ಒಂದು ಹೆಣ್ಣಿದೆ ಎಂದೂ ಭಾವಿಸಿ... ಹೆಣ್ಣು ಬರೀ ಹೆಣ್ಣಲ್ಲ, ಅವಳು ಇನ್ನೊಂದು ಮನೆಯ ಕಣ್ಣು.. ತರಿಸಬೇಡಿ ಆ ಕಣ್ಣಲ್ಲಿ ಕಣ್ಣೀರನ್ನು... ಅತ್ಯಾಚಾರ ಮಾಡಿ ಎಸೆಯಬೇಡಿ ಅವಳನ್ನು.. ಅವಳ ಶಕ್ತಿ ಅವಳೇ ತೊರಿಸುವಳು ನಿಮಗಿನ್ನೂ... ಬರೀ ಕವನ ಓದುವುದರಲ್ಲಿ ಇರದೆ ಇರಲಿ ಆಸಕ್ತಿ ಹೆಣ್ಣನ್ನು ಗೌರವಿಸಿದಾಗಲೇ ಬರುವುದು ಈ ಕವನಕ್ಕೊಂದು ಶಕ್ತಿ....
----------------------------------
ನೋಂದಣಿ ಐಡಿ : KPF-S1-6277
