ಪ್ರೇಯಸಿಯ ವರ್ಣನೆ
ರಚನೆ : ರಾಯಲ್ ಶೆಟ್ಟಿ
----------------------------------
ನಿನ್ನಂದ ಬಣ್ಣಿಸಲು ಚಂದ್ರನು ಕವಿಯಾಗಿರಲು ನಾ ಏನೆಂದು ವರ್ಣಿಸಲಿ ನನ್ನ ನಾಲ್ಕು ಪದಗಳಲಿ, ತಂಗಾಳಿ ಪಿಸುಗುಟ್ಟಿ ಕೇಶರಾಶಿ ಅರಳಿರಲು ನಕ್ಷತ್ರಗಳ ನೆರಳು ಬಿದ್ದು ಹಣೆ ಹುಬ್ಬು ರಚಿಸಿರಲು, ಸೂರ್ಯ ಗ್ರಹಣ ಹಿಡಿದು ಚಂದ್ರನು ಕಪ್ಪು ಕಣ್ಣಾಗಿರಲು, ಕಾಮನಬಿಲ್ಲ ಮಳೆ ಸುರಿದು ಬಣ್ಣದ ತುಟಿ ನಗುತಿರಲು, ಚಂದ್ರನಿಂದ ಪದವೊಂದ ಬಾಡಿಗೆ ಪಡೆದೆ ನಿನ್ನ ಅಪ್ಸರೆ ಎನ್ನಲು, ಅಪ್ಸರೆ ಎನ್ನಲು..
----------------------------------
ನೋಂದಣಿ ಐಡಿ : KPF-S1-6278
