ಚುಟುಕುಗಳ ನಾದ
ರಚನೆ : ರಾಜು ಸಿದ್ದಪ್ಪ ಯರಜರವಿ
----------------------------------
ಕೇಶಿರಾಜನ ಶಬ್ದಮಣಿ ದರ್ಪಣದಿಂದ ವರ್ಣ ಆರಿಸಿ ನಾಗವರ್ಮನ ಭಾಷಾಭುಷನದಿಂದ ಸಾಲುಗಳನ್ನಾ ಹುಡುಕಿ ಕುಮಾರವ್ಯಾಸನ ಕುಮಾರವ್ಯಾಸ ಭಾರತದಿಂದ ಅಲಂಕಾರವನ್ನಾ , ರಾಘವಾಂಕನ ಉದ್ದಂಡ ಷಟ್ಪದಿಯಂತೆ ಚರಣಗಳನ್ನಾ ಗೀಚುವಾಸೆ ಮೂಡಿತು ಈ ಮನಕೆ.. ಇಬ್ಬನಿ ತಬ್ಬಿದ ಇಳೆಯಲಿ ಬೂದಿ ಮುಚ್ಚಿದ ಕೆಂಡದಂತಿಹುದು ಪ್ರೀತಿ.. ನಸುಕಿನ ಬೆಳಕು, ಆರಂಭಿಕ ಪ್ರಣಯ ಪ್ರಸಂಗದ ಆಯಸ್ಸು ಅಲ್ಪಾವಧಿಗಷ್ಟೇ ಸೀಮಿತ..
----------------------------------
ನೋಂದಣಿ ಐಡಿ : KPF-S1-5659
