ನಡೆ-ನುಡಿ
ರಚನೆ : ಶ್ರೀನಿವಾಸ.ಜಿ
----------------------------------
ಮೌನಿಯಾಗು ಮನಕೆ ಹಿತವಾಗು ಮೌನದೊಳಗಿನ ಮಾತನರಿಯುವ ಜ್ಞಾನಿಯಾಗು ಬೆಳಕಾಗು ಬೆಳಕಿನ ಕಾಂತಿಯ ಬೆಳಗುವ ದೀವಿಗೆಯಾಗು ಪರ್ಣವಾಗು ಪತ್ರಹರಿತಂತೆ ಹಸಿರಾಗಿರು ಸಾಧನೆಯಲಿ ಪರ್ಣಮರೆಯ ಕಾಯಿಯಂತಾಗು ದೃಢವಾಗು ಕತ್ತಿಯ ತೀಕ್ಷಣತೆಯಂತೆ ದೃಢ ನಿರ್ಧಾರ ಹೊಂದಿರು ಪುಸ್ತಕವಾಗು ಲೇಖನಗಳ ಆಳವನರಿತ ಜ್ಞಾನ ಭಂಡಾರವಾಗಿರು ಜೌಷಧಿಯಾಗು ಕಾಣದ ನೋವಿನ ನೋವ ಕಳೆಯುವ ವೈದ್ಯನಾಗು
----------------------------------
ನೋಂದಣಿ ಐಡಿ : KPF-S1-5662
