ಹಲಗೆ
ರಚನೆ : ಯಮನೂರಪ್ಪ ಜಿರ್ಲಿ
----------------------------------
ಹುಡುಕುತಿದ್ದೇನೆ ನನ್ನ ನಾನು ಕಳೆದು ಹೋದ ಪ್ರಪಂಚದಲ್ಲಿ.. ಕಂಬನಿ ಮೊಳಗಿದರು ಕಿವಿಗೊಡುತ್ತಿಲ್ಲ ಮನ ಕರಗುತಿಲ್ಲ ಅಂದದ ಜನರಲ್ಲಿ ಯಾವ ಸಂವಿಧಾನವು ಬರೆದರು ಮುರಿಯದು ನನ್ನ ಬದುಕ ಬವಣೆಯು ಎಲ್ಲಿ ಹುಡುಕಲಿ ನನ್ನ ದನಿಯ ನಾ ನನ್ನ ಜೀವವಿದು ಸಿದ್ದವಾಗಿ ಬಿದ್ದಿದೆ ಮೊಳಗಲೆಂದು; ಭಾವನೆಗಳಿಗೆ ಬೆಲೆ ಇಲ್ಲದೆ.... ಕಂಬಳಿಗೆ ಜಾಗವಿತ್ತು ಅದಕ್ಕೆ ಬೆಲೆ ತೆತ್ತು ನನ್ನ ಹುಟ್ಟಿಸಿದ ಮನಿಯಾಗ; ದೀವಿಗೆಯ ಬೆಳಕಿನ್ಯಾಗ ನನ್ನ ದನಿಯು ಹರಡುವುದು ಊರ ಸಂಧಿಗೊಂದಿಯಾಗ ಯಜಮಾನರ ಜಮೀನಿನ್ಯಾಗ; ಮನೆಯ ಪೆಟ್ಟಿಗೆಯಾಗ ನನ್ನ ವಾಸವಂತು ಊರ ಹೋರಗಿನ ಅಗಸಿಯಾಗ
----------------------------------
ನೋಂದಣಿ ಐಡಿ : KPF-S1-5657
