ಸಹನಾ ಮೂರ್ತಿ
ರಚನೆ : ಶ್ರೀಮತಿ . ಶಿಲ್ಪಾವತಿ . ಶಿವಮೊಗ್ಗ .
----------------------------------
ಹೊತ್ತು ನಿಂತಿರುವ ತಾಯಿ ಹೆಣ್ಣು ಹೆತ್ತು ಧರೆಗೆ ನೀಡಿದವಳು ಹೆಣ್ಣು ಸುತ್ತಲಿರುವ ಪ್ರಕೃತಿ ಮಾತೆ ಹೆಣ್ಣು ಒಡಹುಟ್ಟಿದ ಅಕ್ಕ ತಂಗಿಯರು ಹೆಣ್ಣು ಸರಿಸಾಟಿ ಉಂಟೇ ಹೆಣ್ಣು ಜಗದ ಕಣ್ಣು . ಕಣ್ಗಳಲ್ಲಿ ಪ್ರಜ್ವಲಿಸುವ ಜ್ಯೋತಿಯ ತಂದರು ಹೆಣ್ಣಿರದ ಜೀವನವೇ ನಶ್ವರವೆಂದರು ಸರಿ ಸಮನಾದ ಸ್ಥಾನ ತಂದುಕೊಟ್ಟರು ಯಾರಿಗೇನು ಕಮ್ಮಿ ಇಲ್ಲವೆಂಬ ಪಟ್ಟ ಕಟ್ಟಿದರು ಸ್ವಾಭಿಮಾನದ ಬದುಕು ಕಟ್ಟಿಕೊಂಡರು . ದಿಟ್ಟ ಹೆಜ್ಜೆ ಇಟ್ಟು ಇತಿಹಾಸ ಸೃಷ್ಟಿಸಿದಳು ಸಂಸ್ಕೃತಿಯ ಸಾರುವಲ್ಲಿ ಮುಂದಡಿ ಇಡುವಳು ತ್ಯಾಗ ಸಹನೆಗೆ ಅವಳೇ ಪ್ರಥಮಳು ಸರಿಸಾಟಿಯಿಲ್ಲ ಪ್ರೀತಿ ವಾತ್ಸಲ್ಯ ಕರುಣೆಗವಳು ಬದುಕಿನ ಜಂಜಾಟದಿ ತನ್ನನೇ ತಾ ಮರೆತವಳು
----------------------------------
ನೋಂದಣಿ ಐಡಿ : KPF-S1-7144
