Submission 26805

ದಣಿವರಿಯದ ಜೀವಗಳು

ರಚನೆ : ಅರ್ಜುನ್ ಎಂ

----------------------------------

ದಣಿವರಿಯದ ಜೀವ ನನ್ನಪ್ಪ ನನ್ನವ್ವ . ಎರಡು ದೇಹ ಒಂದೇ ಜೀವ ಹೌದು ನನ್ನವನಿಗೆ ದಣಿವಾಗುವುದೇ ಇಲ್ಲವಲ್ಲ ಅದು ಹೇಗೆ ..?? ಮನೆಯಲ್ಲಿ ಎಲ್ಲರಿಗಿಂತ ಮುಂಚೆ ಅಂದ್ರೆ ಆ ಸೂರ್ಯ ಹುಟ್ಟುವ ಮೊದಲೇ ಎದ್ದಿರುತ್ತಾಳೆ . ರಾತ್ರಿ ಎಷ್ಟು ಹೊತ್ತಿಗೆ ಮಲಗುತಾಳೋ ತಿಳಿಯದು. ಏಕೆಂದರೆ ನಾನು ಊಟ ಮಾಡಿದ ಸ್ವಲ್ಪ ಸಮಯಕ್ಕೆ ಮಲಗಿಬಿಟ್ಟಿರುತ್ತೇನೆ . ನಾನು ಮಲಗುವಾಗಲೂ ಕೆಲಸ ನಡೆದೇ ಇರುತ್ತದೆ . ನಾನು ಕಣ್ಣು ಬಿಟ್ಟಾಗಲೂ ಕೆಲಸ ನಡೆದೇ ಇರುತ್ತಿತ್ತು. ಎಷ್ಟೋ ಬಾರಿ ನನಗೆ ನಾನೆ ಪ್ರಶ್ನೆ ಕೇಳಿಕೊಂಡೆ ಅಮ್ಮನ ಕೆಲಸ ಮುಗಿಯುವುದೇ ಇಲ್ಲವೇನೋ ಎಂದು. ಇನ್ನು ನನ್ನಪ್ಪನ ಕೆಲಸದ ಸಮಯ ಬರೋಬ್ಬರಿ 12 ತಾಸುಗಳಿಗೂ ಹೆಚ್ಚು . ಕೆಲಸದಿಂದ ಬರುವಾಗ ಅಮ್ಮ ಹೇಳಿದ ತರಕಾರಿಗಳನ್ನು, ಕೆಲವು ದಿನಸಿ ಪದಾರ್ಥಗಳನ್ನು ಕೊಂಡು ಜೊತೆಗೆ ನನಗೊಂದು ತಿಂಡಿ ತಂದು ಕೊಡುವುದು ಅಪ್ಪನ ರೂಡಿ . ಈಗ ಅಮ್ಮನೂ ಕೆಲಸಕ್ಕೆ ಹೋಗುತ್ತಿದ್ದಾರೆ. ಅಪ್ಪಾ ಹಣಕಾಸು ಮಂತ್ರಿ, ಅಮ್ಮ ಗೃಹ ಮಂತ್ರಿ. ಅಮ್ಮನದು ದಿನಾಲೂ ಎರಡೆರಡು ಶಿಫ್ಟ್ ಮನೆಯಲ್ಲಿ ಮತ್ತು ಗಾರ್ಮೆಂಟ್ಸ್ ನಲ್ಲಿ. ತಮ್ಮ ಸ್ವಂತಕ್ಕಾಗಿ ಏನನ್ನೂ ಮಾಡಿಕೊಳ್ಳಲಿಲ್ಲ ಕರುಣಾಮಯಿ ತ್ಯಾಗಮಯಿ ಎಂಬ ಸುಂದರ ಪದಗಳು ಅಪ್ಪಾ ಅಮ್ಮನಿಗಾಗೇ ಹುಟ್ಟಿಕೊಂಡವೇನೋ. ದಣಿವರಿಯದ ಜೀವ ನನ್ನಪ್ಪ ನನ್ನವ್ವ.

----------------------------------

ನೋಂದಣಿ ಐಡಿ : KPF-S1-7154

0
Total Votes
17
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!