ಕಲಿಯುಗದ ಪ್ರಕೃತಿ
ರಚನೆ : ಜ್ಯೋತಿಗೌಡ ಧನವಾಡೆ
----------------------------------
ಬಿಸಿಲು ಹೆಚ್ಚಿತು ಭೂಮಂಡಲದಲ್ಲಿ, ಮನುಷ್ಯರ ಹೀನಕೃತ್ಯಗಳ ಸಾರಥ್ಯದಲ್ಲಿ, ಪ್ರಾಣಿ-ಪಕ್ಷಿಗಳು ಗತಿಸುವ ಸಮಯದಲ್ಲಿ, ಓ ದೇವ ನೀನೆಲ್ಲಿರುವೆ ಈ ಭೂಮಂಡಲದಲ್ಲಿ..... ಮಾಲಿನ್ಯವಾಯಿತು ನೆಲ ಜಲ ಪವನ, ಸತ್ತುಹೋಯಿತು ಜಲಚರಗಳ ಜೀವನ, ವಾಹನ ಕೈಗಾರಿಕೆಗಳಿಂದಳಿದ ವರುಣ..... ಮರಗಿಡಗಳು ಉರುಳಿದವು ನೆಲಕೆ, ಕಟ್ಟಡಗಳು ಬೆಳೆದವು ಆಗಸಕೆ, ಆದರೂ ಹೋಳೆಯದಂತಾಯಿತು ಜನಮನಕೆ..... ಪ್ರಕೃತಿ ಹೋಯಿತು ಅಳಿವಿನಂಚಿಗೆ, ಕಾಣದೆ ಹೋಯಿತು ಜನರ ಕಣ್ಣಿಗೆ, ಓ ದೇವ ನೀನೇಲ್ಲಿರುವೆ ಇರುವುದೋಂದೆ ದಾರಿ, ನೀನೇ ಕಾಪಾಡು ಈ ಜನಮಂದೆ.....
----------------------------------
ನೋಂದಣಿ ಐಡಿ : KPF-S1-6221
