ಮತ್ತೆ ಸಿಕ್ಕ ಮುತ್ತು!
ರಚನೆ : ಡಾ ಸೌಮ್ಯ ಸಿ ಯು
----------------------------------
ಬಲು ಚಂದ ಆಕೆ, ನನ್ನ ಕನವರಿಕೆ ನಕ್ಕಾಗ ಉಸಿರು ಕಟ್ಟೋ ಅಷ್ಟು, ಮುನಿದಾಗ ಕೆನ್ನೆ ಹಿಂಡೋ ಅಷ್ಟು. ಕೂತಲ್ಲೇ ಕನಸು ತೋರಿಸುವವಳು, ಪಕ್ಕದ ಮನೆ ಅವಳು ಕನಸಿನ ಏರಿನ ಮಧ್ಯ ಎಲ್ಲೋ ಕಳೆದು ಹೋದವಳು! ಹೀಗೆ ಬಂದು ಹಾಗೆ ಹೋದ ನನ್ನಾಸೆಗೆ ನಾನೇ ಗಂಟು ಕಟ್ಟಿ, ಕೆಳಗೆ ಎಲ್ಲೋ ಅವಿತಿಟ್ಟೆ. ನಡು ದಾರಿಯಲ್ಲಿ ಕಳೆದೋದ ಮನಕೆ ಮತ್ತೆ ಗರಿಕಟ್ಟಿ ಹಾರುವ ಬಯಕೆ! ಹೀಗೆ ಕಾಡಿ ಹೋದವಳು, ಮತ್ತೆ ಸಿಕ್ಕಳು, ಒಪಿಡಿಯ ಕೋಣೆಯಲ್ಲಿ ಕನ್ನಡಕದ ಹಿಂದೇನು ಹೊಳಪಿನ ಕಣ್ಣು, ಅದೇ ಖುಷಿ, ಅದೇ ಮಿಂಚು. ಈಗಲೂ ಕಾಶ್ಮೀರ ಕಂಡಂತೆ, ನೋಡಿದಾಗೆಲ್ಲ ಹೃದಯಕ್ಕೆ ನಿಂತೊಗೊ ಚಿಂತೆ, ಅವಳು, ಒಂದು ಬಾರಿಯ ಮುತ್ತು, ಕಾಪಾಡಬೇಕಿದೆ ಮತ್ತೆ ಕೈ ಜಾರದಂತೆ!
----------------------------------
ನೋಂದಣಿ ಐಡಿ : KPF-S1-6229
