Submission 22628

ನನ್ನಾಕೆಯ ಹುಟ್ಟಿದ ದಿನ

ರಚನೆ : ಚಿದಾನಂದ ಚನಗೌಡ ಪಾಟೀಲ

----------------------------------

ಚಂದಿರನೇತಕೋ ನಾಚುತಿಹನಮ್ಮ? ನಿನ್ನ ಅಂದ ನೋಡಿ ಬೆರಗಾಗಿರುವನಮ್ಮ, ಸೂರ್ಯನೇತಕೋ ಮಿಂಚುತಿಹನಮ್ಮ? ನಿನ್ನ ಕಣ್ಣ ಕಾಂತಿಗೆ ಮನಸ್ಸೋತಿರುವನಮ್ಮ, ಇಳಿ ಸಂಜೆ ಏಕೋ ಕೆಂಪಾಗಿಹುದಮ್ಮ? ನಿನ್ನ ಹಣೆಯ ಮೇಲಿನ ಕುಂಕುಮಕ್ಕೆ ತಲೆ ಬಾಗಿಹುದಮ್ಮ, ಪ್ರಕೃತಿಯ ಮಡಿಲು ಇಂದೇಕೋ ಹಸಿರಾಗಿಹುದಮ್ಮ? ನಿನ್ನ ಕೈಯ ಹಸಿರು ಬಳೆಗೆ ಶರಣಾಗಿಹುದಮ್ಮ, ಈ ಎಲ್ಲ ಸುಂದರ ಪ್ರಕೃತಿ ಸಂಚಲನಗಳು, ನನ್ನವಳ ಅರೋಗ್ಯ, ಆಯಸ್ಸಿಗೆ ಸಂಕಲನಗಳು, ಈ ದಿನ, ಸುದಿನ ಪ್ರಕೃತಿಯ ಅಂದ ಹೆಚ್ಚಿಸಿದ ದಿನ, ಅದೇ ಈ ನನ್ನ ಒಲುಮೆಯ ಚೆಲುವೆ ಹುಟ್ಟಿದ ದಿನ.

----------------------------------

ನೋಂದಣಿ ಐಡಿ : KPF-S1-6150

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!