Submission 22626

ಸಾಕಯ್ಯ ದೇವ ಈ ಅಗ್ನಿ ಪರೀಕ್ಷೆ

ರಚನೆ : ಡಾ. ಗೋಪಿಕಾ, ಎಂ. ಹೆಚ್

----------------------------------

ಹಸಿರೇ ನನ್ನ ಉಸಿರು ಎಂದು ನಂಬಿಕೊಂಡ ಬಾಳಲ್ಲಿ ಉರಿವ ಅಗ್ನಿ ಜ್ವಾಲೆಯಾಗಿ ದಗದಗಿಸಿದೆ ಹೊಲದಲ್ಲಿ ಕಷ್ಟ ಪಟ್ಟು ಹೊಟ್ಟೆ ಕಟ್ಟಿ ಬೆಳೆಸಿದೆಳೆಯ ಮರಗಿಡಗಳ ಸುಟ್ಟಿತು ಯಾರ ಶಾಪವೋ ದೈವದ ಕೋಪವೋ ಏಕೆ ಹೀಗೆ ತಟ್ಟಿತು ನೊಂದ ಜೀವಕ್ಕೆ ಅನ್ನ ನೀರು ಹೊಟ್ಟೆಗಿಂದು ಇಳಿಯದು ಬದುಕ ಹಾದಿಯಲ್ಲಿ ಬವಣೆ ಎಂದೂ ಕೂಡ ಮುಗಿಯದು ನೋವುಂಡ ಮನಕೆ ನಲಿವಿನ ನಿರೀಕ್ಷೆ ಸಕಯ್ಯ ದೇವ ಈ ಅಗ್ನಿ ಪರೀಕ್ಷೆ ಕರುಣೆಯು ಇದ್ದರೆ ಕನಿಕರಿಸು ಏನೇ ತಪ್ಪುಗಳಿದ್ದರು ನೀ ಕ್ಷಮಿಸು ಮಳೆಯ ತಾರೋ ಭೂಮಿತಾಯಿ ಬಾಯಿ ತೆರೆದು ಕಾದಿದೆ ಇಳೆಯ ತಂಪು ಮಾಡಿ ಸುಡುವ ತಾಪವನ್ನು ಇಳಿಸದೆ ಕಮರಿ ಹೋದ ಹಸಿರ ವನಕ್ಕೆ ಮತ್ತೆ ಚಿಗುರು ಮೂಡಲಿ ನೊಂದ ಬೆಂದ ಜೀವ ಕೊಂಚ ನೆಮ್ಮದಿಯನ್ನು ಕಾಣಲಿ

----------------------------------

ನೋಂದಣಿ ಐಡಿ : KPF-S1-6145

0
Total Votes
1
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!