ನಾನೆಂದರೆ ನನ್ನ ಕವಿತೆಗಳಿಗೂ ಪ್ರೀತಿ
ರಚನೆ : ರಾಜೇಂದ್ರ ಪಾಟೀಲ
----------------------------------
ನಾನೆಂದರೆ ನನ್ನ ಕವಿತೆಗಳಿಗೂ ಪ್ರೀತಿ ನಾನೆಂದರೆ ನನ್ನ ಕವಿತೆಗಳಿಗೆ ಬಲು ಪ್ರೀತಿ ಮುದ್ದೋ ಮುದ್ದುಎಲ್ಲಿಲ್ಲದ ಕಕುಲಾತಿ ಸುಮ್ಮನೆ ಕೂತರೂ ಸಾಕು ಎದೆತುಂಬ ಭಾವ ಉಕ್ಕಿಏನೆಲ್ಲ ಶಬ್ದಗಳು ಓಲಾಡತೊಡಗುತ್ತವೆ ಪ್ರೀತಿ ಪ್ರೇಮ ಅಂತಃಕರ ಸ್ನೇಹ ಸೌಹಾರ್ದ ಒಲವು ವಾತ್ಸಲ್ಯಗಳ ಸೆಲೆ ಹರಿಯುತ್ತದೆ ಧಾರೆಯಾಗಿ. ನಾ ಬರುವೆ ನಾ ಬರುವೆ ಎನ್ನುತ್ತ ಒಂದೇ ಭಾವದಹಲವು ಶಬ್ದಾಲಂಕಾರಗಳು ಗಿರಕಿ ಹೊಡೆಯುತ್ತವೆ. ಮನದ ಮಿಡಿತಗಳು ಎದೆಯ ತುಡಿತಗಳು ಒಲವ, ನೋವುಗಳು ಕವಿತೆಗಳಾಗಿ ಸ್ಪಂದಿಸುತ್ತವೆ. ಒಂಟಿತನದ ಕ್ಷಣಗಳನ್ನು ತುಸು ಹಿತವಾಗಿಸುತ್ತ ಬದುಕಿನ ಭಾರವನ್ನು ಹಗುರಗೊಳಿಸುತ್ತವೆ. ನನಗೂ ಕವಿತೆಗಳೆಂದರೆ ಅನನ್ಯ ಅನುಭೂತಿ ; ಅನುಕ್ಷಣವೂ ಜೊತೆಗಿರುವ ಚೈತನ್ಯದ ಒರತಿ. ನಾನೆಂದರೆ ನನ್ನ ಕವಿತೆಗಳಿಗೆ ಬಲು ಪ್ರೀತಿ ಮುದ್ದೋ ಮುದ್ದು ಎಲ್ಲಿಲ್ಲದ ಕಕುಲಾತಿ
----------------------------------
ನೋಂದಣಿ ಐಡಿ : KPF-S1-6111
