ಪಯಣದ ಹೊಸ ಹಾದಿ ಯುಗಾದಿ
ರಚನೆ : Dr. ಮಾರುತಿ ಬೇಂದ್ರೆ
----------------------------------
ಯುಗಾದಿ ಬರುವುದು ವಸಂತ ಋತುವಿನಲ್ಲಿ ಕೊಂಡು ತರುವುದು ಹರ್ಷವ ಜೀವನದಲ್ಲಿ, ಸುತ್ತದಿ ಚಿಗುರುವವು ಗಿಡ - ಮರಗಳ ಎಲೆ ತರುವುದು ಬಾಳಿನಲ್ಲಿ ಹೊಸ ಅಲೆ, ಮಾವು, ಬೇವು -ಬೆಲ್ಲವ ತಿಂದು ಸಂತೋಷ - ಸಡಗರ ಸಂಭ್ರಮದಲ್ಲಿ ಮಿoದು, ಸ್ವೀಕರಿಸುವೆವು ಜೀವನದಿ ಎಲ್ಲವೂ ಸಮವಾಗಿ. ಹಂಚುವೆವು ಪ್ರೀತಿ - ಪ್ರೇಮವ ಜಗವೆಲ್ಲ ಸಮನಾಗಿ, ಅನ್ನದಾತಾರ ಬದುಕಿನಲ್ಲಿ ಮೂಡಿಸುವುದು ನವ ಚೈತನ್ಯ ಈ ಲೋಕದ ಜನತೆಗೆ ಅನ್ನದಾತನ ಕೊಡುಗೆ ಬಲು ಅನನ್ಯ, ಇದಾಗಿದೆ ಭರತಖಂಡದ ಹೊಸ ವರ್ಷ ಎಲ್ಲರ ಮನಸ್ಸಿಗೆ ತರುವುದು ಹೊಸ ಹರ್ಷ. ಇದೇ ಯುಗ - ಯುಗಗಳು ಕಳೆದು ಬರುವ ಯುಗಾದಿ, ಆರಂಭವಾಗುವುದಿಲ್ಲಿಂದ ಬದುಕಿನ ಪಯಣದ ಹೊಸ ಹಾದಿ.
----------------------------------
ನೋಂದಣಿ ಐಡಿ : KPF-S1-6105
