ಸಾವು
ರಚನೆ : ಚನ್ನಕೇಶವ ಜಿ ಲಾಳನಕಟ್ಟೆ
----------------------------------
ಎಲ್ಲರೆಡೆಗು ಬರುವುದೊಮ್ಮೆ ಮರೆಯದಂತೆ ಸಾವು ಎಲ್ಲವನ್ನು ತೊರೆಸಿ ಕೊನೆಗೆ ಬಿಡಿಸಿ ಭವದ ನೋವು ಗಮ್ಯದೆಡೆಗೆ ಸಾಗುವಾಗ ಎಡರು ತೊಡರು ಬೇಲಿ ಸೌಮ್ಯವಾಗಿ ದಾಟಲೆಣಿಸೆ ತಿರುಗುತಿಹುದು ಗಾಲಿ ನಾವು ನೀವು ಎಲ್ಲರಿಲ್ಲಿ ಹತ್ತಿ ಜವನ ತೇರು ಸಾವಿನೂರ ತಲುಪಿ ಮತ್ತೆ ಮರಳದಂಥ ಊರು ಬುವಿಗೆ ಬಂದ ನೆಪವಿದೇಕೊ ಅರಿಯದಾಗಿ ನೊಂದೆ ಸವಿಯ ಕಹಿಯನುಣ್ಣುತಿಲ್ಲೆ ಬೇಗೆಯೊಳಗೆ ಬೆಂದೆ ಹೆತ್ತ ಮಡಿಲ ಹೊತ್ತ ಮಣ್ಣ ಋಣವ ತೀರಿಸುತ್ತ ಸತ್ತ ಮೇಲು ನಾಲ್ಕು ಜನರು ನೆನೆಯುವಂತೆ ಚಿತ್ತ ಹುಟ್ಟಿದೊಡನೆ ಸಾವುಗತ್ತಿ ತೂಗುತಿಹುದು ಮೇಲೆ ಹುಟ್ಟು ಹಾಕಿ ತಟದ ಕಡೆಗೆ ಬಿಡಿಸಿ ಭವದ ನಾಲೆ ಇರುಳು ಹಗಲಿನೊಳಗೆ ಬಾಳು ಸಾವು ತೂಗುಗತ್ತಿ ತೆರಳೊ ಮುಂಚೆ ತೊರೆಯುತೆಲ್ಲ ನಿನ್ನ ಚಾಪನೊತ್ತಿ.
----------------------------------
ನೋಂದಣಿ ಐಡಿ : KPF-S1-6103
