ಹೆಣ್ಣು ಜೀವ
ರಚನೆ : ಜ್ಞಾನೇಶ್ವರ ನಿಂಗಪ್ಪ ಹೂಗಾರ
----------------------------------
ಹುಟ್ಟಿದೆ ನೀನು ಕರುಳಿನ ಕಣ್ಣಾಗಿ ಬೆಳೆದೇ ನೀನು ಮುದ್ದಿನ ಗಿಣಿಯಾಗಿ ಬೆಳೆಸಿದರು ನಿನ್ನನ್ನು ಪ್ರಾಣಕ್ಕೆ ಪ್ರಾಣವಾಗಿ ಕೊನೆಗೊಂದು ದಿನ -ಬೆಳೆದು ನಿಂತೆ ಸುವಾಸನೆಯ ಹೂವಾಗಿ ಹೊರನಡೆದೇ ನೀನು ಶ್ರೀಮತಿಯಾಗಿ ಜೊತೆಯಾದೆ ಒಬ್ಬನ ಮಡದಿಯಾಗಿ ಬೆಳಗಿಸಿದೆ ಮನೆಯ ಜ್ಯೋತಿಯಾಗಿ ಕೊನೆಗೊಂದು ದಿನ -ಕೊಟ್ಟೆ ಜನ್ಮವ ತಾಯಿಯಾಗಿ ಬೆಳೆಸಿದೆ ಮಕ್ಕಳನ್ನ ಆಸ್ತಿಯಾಗಿ ಹಂಬಲಿಸಿದೆ ಮಕ್ಕಳ ಕರುಣೆ ಪ್ರೀತಿಗಾಗಿ ಆದರೆ ಸಿಡಿದರು ಜ್ವಾಲಾಮುಖಿಯಾಗಿ ಕೊನೆಗೊಂದು ದಿನ -ಸಮಾಜದಿಂದ ದೂರವಾದೆ ವಿಧವೆಯಾಗಿ.
----------------------------------
ನೋಂದಣಿ ಐಡಿ : KPF-S1-6085
