Submission 22257

ಮೌನ ಗಾನ

ರಚನೆ : ಅಭಿಷೇಕ ಸ್ವಾಮಿ ಹೊಸಮಠ ಎ.ಎಸ್.ಕೆ.ಸ್ವಾಮಿ

----------------------------------

ನೆಲದ ಜಲದಲಿ ಜೀವಿಸು ಮೊದಲು ಗೆಲುವು ಹುಡುಕಿ ಬದುಕು ತರುವುದು ಬೆಳಕು!!ಪಲ್ಲ!! ಕಾಲವೇ ಮೌನವಾಗಿ ಓಡುತ್ತಿದೆ ಇಂದು ನಾಳೆಯ ಚಿಂತೆ ನೀ ಮಾಡದೆ ನಿತ್ಯ ಜೀವಿಸೆಂದು!! ಸಾಲು ಗಿಡಗಳ ನೆರಳು ಈ ಧರಣಿಗೆ ಸಾಲು ನೆನಪುಗಳ ಇರುಳು ಈ ಮನದ ಗೋಡೆಗೆ!!೦೧!! ಕರಳು ಕರಾಳವೆಂದು ಜಪಿಸುತಿದೆ ಬೆರಳು ಹಿಡಿದ ಕೈಯಿಂದು ಬದುಕಿನ ಸ್ವರ ಮರೆತಿದೆ!! ಸರಳ ಬದುಕಿನ ಯಾನ ಅಸ್ಪಷ್ಟವಾಗಿದೆ ನರಳುವ ಮನಗಳ ಧ್ಯಾನವಿಂದು ಗಾನವಾಗಿದೆ!!೦೨!! ರಸ್ತೆಯ ಮೇಲೆ ಶಿಸ್ತಿಲೆ ಮನ ಗಸ್ತು ಹಾಕುತಿದೆ ವಸ್ತಿ ಮಾಡಬೇಕಿದ್ದ ಮನ ಸ್ಮಶಾನದ ಗೋಷ್ಠಿ ಕೇಳುತಿದೆ!! ಶಿಸ್ತು ಮರೆತ ಮಾನವ ಮೌನದ ಪ್ರತಿಬಿಂಬವಾದ ಹಸ್ತದಿಂದ ಹಸ್ತಕ್ಕೆ ಹೃದಯದ ಸಾಸ್ತಾನು ಲೂಟಿಯಾಗಿ ಜಪ್ತಿಯಾಗಿದೆ!!೦೩!!

----------------------------------

ನೋಂದಣಿ ಐಡಿ : KPF-S1-6000

226
Total Votes
924
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!