ಯಾರು ನಿನ್ನವರು?
ರಚನೆ : ಶ್ರೀ ಶಿವಾನಂದ ರಾಮದುರ್ಗ
----------------------------------
ನಗುಮುಖದಿ ನಸುನಗುತ ಎದುರಲ್ಲಿ ಬೆಟ್ಟದಷ್ಟು ಹೊಗಳುತ ಮುಂದೆ ಹೋದಾಗ ಹಿಂದೆ ತೆಗಳುತ ಇರುವ ಜನಗಳ ಮಧ್ಯೆ, ಯಾರು ನಿನ್ನವರು? ಮುಖಕ್ಕೆ ಮುಖ ಕೊಟ್ಟರೆ ಘರ್ಷಣೆಯಾದೀತೆಂದು ಬೆನ್ನು ಕೊಟ್ಟರೆ ಬೆನ್ನಿಗೆ ಚೂರಿ ಹಾಕಿ, ಸಾಲದೆಂದು ಮಾತಿನ ಇರಿತದಿಂದ ಹೃದಯವನ್ನು ಕದಡುವ ಜನಗಳ ಮಧ್ಯೆ, ಯಾರು ನಿನ್ನವರು? ಕಷ್ಟ ಕಾರ್ಪನ್ಯಗಳ ಸಮಯದಲ್ಲಿ ದುಃಖ ದುಮ್ಮಾನಗಳ ಸಂತೈಸುವ ನೆಪದಲ್ಲಿ ಆಲಿಂಗನವ ಬಯಸಿದಂತೆ ನಟಿಸಿ ಉಸಿರುಗಟ್ಟಿಸುವ ಜನಗಳ ಮಧ್ಯೆ, ಯಾರು ನಿನ್ನವರು?
----------------------------------
ನೋಂದಣಿ ಐಡಿ : KPF-S1-5999
