ತಾಯಿ....
ರಚನೆ : ಚಂದು ಬಸವರಾಜ್ ಪೂಜಾರಿ
----------------------------------
ತಾಯಿ... ಮಮತೆಯ ಪ್ರತಿಬಿಂಬ ಅವಳು, ಯಾವಾಗಲೂ ಮಕ್ಕಳಿಗಾಗಿ ಬದುಕಿರುವವಳು... ಹುಟ್ಟಿದಾಗ ಎದೆ ಹಾಲು ಕೊಡುವವಳು , ಮಕ್ಕಳ ಶ್ರೇಯಸಿಗಾಗಿ ದಿನವು ಬೇಡುವವಳು , ತನ್ನವರ ನಗುವಿಗೆ ಯಾವಾಗಲೂ ಹಂಬಲಿಸುವವಳು , ಕಷ್ಟಗಳ ಮಳೆ ಇದ್ದರು ಕೊಡೆಯ ಆಸರೆಯಂತೆ ತನ್ನವರ ಕಾಯುವವಳು .... ಬೇಸರವಾದರೂ ತೋರಿಸದವಳು, ಮಂದಹಾಸವೇ ಅವಳ ತವರು. ತವರ ತೊರೆದರು ಅದನ್ನು ಮರೆಯದೆ ಇದ್ದವರಲ್ಲಿ ಹೊಸ ತವರ ಸೃಷ್ಟಿಸುವವಳು .... ಪ್ರಕೃತಿಯಾಗಿ ಕಾಪಾಡುವವಳು, ಶಕ್ತಿಯಾಗಿ ರಕ್ಷಿಸುವವಳು, ಅನ್ನದಾತೆಯಾಗಿ ಸಲಹುವವಳು, ಕೈ ಒಡ್ಡಿ ಕೇಳಿದರೆ ಏನನ್ನು ಇಲ್ಲ ಎನ್ನದವಳು ... ಗಂಡನ ಪಾಲಿನ ಆಧಾರವಾದವಳು, ಮಕ್ಕಳ ಪಾಲಿನ ಆಸರೆಯಾದವಳು , ಎಲ್ಲರಲ್ಲೂ ಮೋಹವಿದ್ದರೂ ಕೊನೆಗಾಲದಲ್ಲಿ ಯಾರ ಹಂಗು ಬಯಸದವಳು.
----------------------------------
ನೋಂದಣಿ ಐಡಿ : KPF-S1-5783
