Submission 21819

ಮಗುವಾಗು ಮನದೊಳಗೆ

ರಚನೆ : ನಾಗಯ್ಯ ಬೊಳ್ಳೊಳ್ಳಿ

----------------------------------

ಮಗುವಾಗು ಮನದೊಳಗೆ ಮರೆತು ಅವರಿವರ ಸಾವಿರ ಚಿಂತೆ ಕಿವುಡಾಗು ಕಾಂಚಾಣದ ಸ್ವರಕೆ ನಿನ್ನ ಹೋಲಿಸದಿರು ಅವರಿವರಂತೆ ಬದುಕಿಗೆ ಶ್ರಮವೇ ಮುನ್ನುಡಿಯಂತೆ ಜೀವಿಸು ನಿಷ್ಕಲ್ಮಶ ಮಗುವ ಮನದಂತೆ ಆಗಸಕೆ ಎರಿದರು ಮರೆಯದಿರು ಸರಳತೆ ಅಳಿಯಲಿ ಸ್ವಾರ್ಥ ಉಳಿಯಲಿ ಮುಗ್ಧತೆ ಮನಬಿಚ್ಚಿ ನಗು ಮಗುವಂತೆ ಕಷ್ಟಗಳೆ ಹೆದರಿ ದೂರಾಗುವಂತೆ ಭರವಸೆಯ ಬೆಳಕು ಮೂಡುವಂತೆ ಮಗುವಾಗು ಮನದೊಳಗೆ ಮರೆತು ಅವರಿವರ ಸಾವಿರ ಚಿಂತಿಯೇ ಚಿತೆ ಎರಿಸದಂತೆ

----------------------------------

ನೋಂದಣಿ ಐಡಿ : KPF-S1-5696

3
Total Votes
25
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!