ಬೇಜಾರ್ ಬೆಂಗಳೂರು
ರಚನೆ : ಸ್ವರ್ಣ ಪ್ರಕಾಶ್
----------------------------------
ಬೇಡ ಸ್ವಾಮಿ ಬೆಂಗಳೂರು ಜೀವನ ಬೇಜಾರ್ ಬಂದೋಯಿತು ನೋಡಲಾಗದಷ್ಟು ಉದ್ದಗಲ ಬೆಳ್ಕೊಂಡು ಹೋರಿತೋಯಿತು. ಇಟ್ಟಿಗೆ ಇಟ್ಟಿಗೆ ಸೇರಿದಂತೆ ಬಿಲ್ಡಿಂಗ್ ಬೆಳ್ದೋಯಿತು. ದಿನನಿತ್ಯ ವಸ್ತುವಿನ ಬೆಲೆಎಲ್ಲಾ ಗಗನಕ್ಕೆರೋಯಿತು. ಬೆಂಗಳೂರಿನ ಮೂಲೆಮೂಲೆಗೂ ಮಧ್ಯಪಾನ ಧೂಮಪಾನ ಸಾಗರದ ದರ್ಶನವಾಯಿತು.ಗಾಳಿ ಬೆಳಕು ಅನ್ನೋದೆಲ್ಲ ರೇಷನ್ಆ ಗೋಯಿತು. ತಂಪಿನ ತಾಣ ಅನ್ನೋ ಬೆಂಗಳೂರಿನ ಹೆಸರೇ ತಲೆ ಕೆಳಗಾಗೋಯ್ತು. ತಾಯಿಯ ಹಾಲಾಷ್ಟು ಉತ್ತಮವಾದ ನೀರು ಕೂಡ ಬೆಲೆ ಬಾಳುವಂತಾಯಿತು.
----------------------------------
ನೋಂದಣಿ ಐಡಿ : KPF-S1-5640
