Submission 21640

ಮಹಿಳೆ

ರಚನೆ : ಮನೋಹರ್ ಬಡಿಗೇರ್

----------------------------------

ನಾವೊಂದು ಕೊಂಡಂತೆ ಕೇವಲ ಪದವಲ್ಲ ಮಹಿಳೆ ಅವಳೇ ನಮ್ಮ - ನಿಮ್ಮೆಲ್ಲರ ಮನೆಯ ಕಳೆ | ತಾಯಿಯಾಗಿ ತೋರುವಳು ಮಮತೆಯ ಚಿಲುಮೆ ಹೆಂಡತಿಯಾಗಿ ಕೊಡುವಳು ಬಾಳಿನಲಿ ಪ್ರೀತಿಯ ಒಲುಮೆ| ಮಗಳಾಗಿ ನೀಡುವಳು ನಮಗೆ ತಂದೆಯೆಂಬ ಹಿರಿಮೆ ಸಾಕಲ್ಲವೇ ಈ ಜನ್ಮಕೆ ಪಡೆಯಲು ಅವಳ ಕರುಣೆ || ಮಾತೆಯಾಗಿ ತೋರುವಳು ಕೊನೆಯಿಲ್ಲದ ಮಮತೆ ಮಡದಿಯಾಗಿ ಅವಳದು ಸಾಟಿಯಿಲ್ಲದ ಕ್ಷಮತೆ | ಸಹೋದರಿಯಾಗಿಯಂತೂ ಅವಳ ಕರುಣೆ ಅಗಣಿತ ಸುತೆಯಾಗಿ ಜನಿಸಿ ಕರೆಸಿಕೊಳ್ಳುವಳು ಸುಜಾತ || ಗಾದೆಯೊಂದಿದೆ ""ನಾರಿ ಮುನಿದರೆ ಮಾರಿ"" ತಿಳಿದಿಲ್ಲವೇ ಎಮಗೆ ಅವಳೇ ನಮ್ಮ ಬಾಳಿನ ರಹದಾರಿ | ಕೆಲವೊಮ್ಮೆ ಅವಳು ನಾರಿಯೋ, ಮಾರಿಯೋ ಆದರೆ ಅವಳೇ ನಮ್ಮನೆಯ ಸಂತಸದ ಹೊಳೆಯೋ||

----------------------------------

ನೋಂದಣಿ ಐಡಿ : KPF-S1-5558

15
Total Votes
74
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!