Submission 26815

ನೀನು ನೀನಾಗಿರು

ರಚನೆ : ಮನೋಜ್‌ಗೌಡ ಎಂ

----------------------------------

ಕಷ್ಟ ಯಾರಿಗಿಲ್ಲದೋ.. ಮನುಜ ಕಷ್ಟ ಎಂಬುದು ಸಹಜ |ಪ| ಕಷ್ಟದ ನರಕಕ್ಕೆ ನೀ ಶರಣಾದರೆ ಸುಖದ ಸ್ವರ್ಗಕ್ಕೆ ನೀ ಕಾಣೆಯಾದರೆ ನಿನ್ನನೂ ನೀ ಕಳೆದುಕೊಂಡಾಗ ಈ ಜೀವನದ ಬೆಲೆ ಎಲ್ಲಿಹುದೋ! ಮಾತನಾಡದ ಮೃಗಕ್ಕೂ ಕಷ್ಟ ಪ್ರತಿಕ್ರಿಯಿಸದ ವೃಕ್ಷಕ್ಕೂ ಕಷ್ಟ ಈ ಕಷ್ಟಗಳ ಕರ್ತನಿಗೂ ಕಷ್ಟ ಕಷ್ಟಕ್ಕೆ ಕಷ್ಟ ತಪ್ಪಿದ್ದಲ್ಲ ನಷ್ಟ ! ಬಂದಿದ್ದು ಬರಲಿ ಆಗಿದ್ದು ಆಗಲಿ ನಿನ್ನಾಸೆ ನಿನ್ನಲ್ಲಿ ಜೀವಂತವಾಗಿರಲಿ ನಿನ್ನದೆಂಬುದು ನಿನ್ನಲ್ಲೇ ಇರುಹುದು ಈ ಜೀವನ ಕಷ್ಟ ಸುಖಮಯ !

----------------------------------

ನೋಂದಣಿ ಐಡಿ : KPF-S1-7146

0
Total Votes
18
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!