ಭೂ ತಾಯ ಒಡಲು ಉಳಿಸಿ
ರಚನೆ : ಶ್ವೇತಾ ಡಿ ಬಂಟ್ವಾಳ
----------------------------------
ಬನ್ನಿರಣ್ಣ ಬನ್ನಿರಕ್ಕ ಸ್ವಚ್ಛ ನಾಡು ಕಟ್ಟೋಣ ನಾವು -ನೀವು -ಅವರು- ಇವರು ಎಲ್ಲರೂ ಒಟ್ಟಾಗಿ ಏಕ ಚಿತ್ತದಲಿ ಸ್ವಚ್ಛತೆಯ ಮಂತ್ರ ಪಠಿಸೋಣ ಆದಿಯಲಿ ಮೈ - ಮನಗಳ ಕೊಳೆ ಕಳೆದು ಪರಿಶುದ್ಧರಾಗಿ ನಿನಗೆ ನೀನೇ ಗುರುವಾಗಣ್ಣ ಮುಸುರೆ ತಿಪ್ಪೆ ಒಗೆಯದೆ ಮರು ಬಳಕೆಯ ಮಾಡಣ್ಣ ಜಯಭೇರಿ ಸದಾ ನಿನದೆ ಎಲ್ಲೇ ಇರು ಕಸದ ಬುಟ್ಟಿ ಬಳಸಣ್ಣ ಖಾದಿ ಬಟ್ಟೆ ಧರಿಸಿ ಆಧುನಿಕ ಬಟ್ಟೆ ತ್ಯಜಿಸಿ ಸ್ವಚ್ಛತೆಗೆ ಭಂಗವಾದೊಡೆ ಸಿಡಿದೆದ್ದು ಘರ್ಜಿಸಣ್ಣ ಭೂತಾಯ ಒಡಲು ಬಗೆಯದೇ ಉಳಿಸಿ ನೋಡಿ ಕಲಿ ಮಾಡಿ ತಿಳಿ ಎಂದು ಸಾರಣ್ಣ ಕಸವ ತೊಡೆಯೇ ಮೊದಲಾಗಿ ಪ್ಲಾಸ್ಟಿಕ್ ತ್ಯಜಿಸಣ್ಣ
----------------------------------
ನೋಂದಣಿ ಐಡಿ : KPF-S1-7136
