Submission 22692

ಮನದಾಳದ ಪದ

ರಚನೆ : ಪ್ರಾಪ್ತಿ ನಾಯಕ

----------------------------------

ಕೇಳಲೇನು ಉದ್ದದೊಂದು ಪ್ರಶ್ನೆ, ಕೊಡಬಹುದೆ ಪುಟ್ಟ ಉತ್ತರ ಹೇಳಲೇನು ದಿನದ ಪೂರ್ತಿ ಚಿತ್ರಣ, ನೀಡಬಹುದೆ ಕೆಲವೇ ಕೆಲವು ಸಮಯ? ಹೇಳಬಯಸುವೆ ಮನದಾಳದ ಇಂಗಿತವ, ಶಬ್ಧ ಹುಡುಕದಾದೆ! ಕುರುಹೇ ಇಲ್ಲದಂತೆ ಮಾಯವಾದವರ, ಕಾರಣ ಕೇಳದಾದೆ! ಅಂತರಾಳದಲ್ಲೆಲ್ಲೋ ಹುಟ್ಟುವ ದಿಗಿಲಿಗೆ, ಉತ್ತರ ಹೇಳದಾದೆ! ಕಂಡೂ ಕೇಳರಿಯದ ಜನರ ನಡುವೆ ಸಿಕ್ಕು, ಒಂಟಿ ನಾನಾದೆ!

----------------------------------

ನೋಂದಣಿ ಐಡಿ : KPF-S1-6167

0
Total Votes
2
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!