ಜ್ಞಾನದ ಶಿಲ್ಪಿ
ರಚನೆ : ಸಂಪತಕುಮಾರ ಬಿ ಕೆ
----------------------------------
ಅಜ್ಞಾನದ ಅಂಧಕಾರವ ತೊಳೆದು ಸುಜ್ಞಾನವೆಂಬ ಸಾಗರದಲ್ಲಿ ಈಜು ಕಲಿಸುವವರು ...!! ಜೀನವದ ಕಷ್ಟಗಳನ್ನ ಸಲುಹಲು ಸಂಸ್ಕಾರವ ನೀಡಿ ಯಶಸ್ಸಿನ ಪಥವನು ತೋರುವವರು...!! ಯಾವಾಗಲೂ ಸದಾ ನಿನ್ನ ಕಾರ್ಯವನ್ನು ನೀನೇ ಮಾಡಿಕೋ ಎಂದು ಮನವಲಿಸಿ ನಮ್ಮನ್ನು ಕ್ರಿಯಾಶೀಲರನ್ನಾಗಿಸುವರು...!! ಪಠ್ಯ ಪುಸ್ತಕಕ್ಕೆ ಸೀಮಿತಗೊಳಿಸದೇ ನಮ್ಮನು ಪಠ್ಯೇತರ ಚಟುವಟಿಕೆಯಲು ಭಾಗವಹಿಸಲು ಪ್ರೇರೆಪಿಸುವರು....!!! ಓದಿನಿಂದ ಜ್ಞಾನವಂತರಾಗಲು ಸಮಾಜದಲ್ಲಿ ಗೌರವಯುತವಾಗಿ ಬದುಕಿ ಬಾಳಲು ಹರಸುವವರು...!!! ಶಿಕ್ಷಕರು ಅದ್ಭುತವಾದ ಜ್ಞಾನ ದೀಪ ಸಮಾಜದ ಅಂಧಕಾರವನ್ನು ತೊಡೆಯಲು ವಿದ್ಯಾರ್ಥಿಗಳೆಂಬ ಬೆಳಕು ಚೆಲ್ಲುವರು...!!!
----------------------------------
ನೋಂದಣಿ ಐಡಿ : KPF-S1-5773
