Submission 21939

ವೃದ್ಧಾಶ್ರಮ ( ವೃದ್ಧ ಮನಗಳ ಸ್ವಾಗತ)

ರಚನೆ : ಮಹೇಶ ಹೈಕಾಡಿ , ಚಾರ

----------------------------------

ನಟ್ಟಿರುಳು ದಾಟಿದರು ನಿದ್ದೆ ಸುಳಿಯದು ಕಣ್ಣಿಗೆ ಮಗ್ಗುಲ ಬದಬದಲಿಸಿ ಸಾಕಿನ್ನು ಎನ್ನುತಿದೆ ಹಾಸಿಗೆ ಸುರಿಸುರಿದು ಬತ್ತಿದ ಕಣ್ಣಲ್ಲಿ ನೀರೆ ಬಾರದು ಹೊರಗೆ ಸಂಕಟದುರಿಗೆ ಬೆಂದ ಹೊಟ್ಟೆ ತಣ್ಣೀರಿಗೂ ಆಗದು ತಣ್ಣಗೆತನ್ನವರಿಗಾಗಿ ದುಡಿದ ದೇಹವೀಗ ಬಳಲಿದೆ ತನ್ನವರಿಗೋ ಸೋತ ದೇಹವೀಗ ಬೇಡವಾಗಿದೆ ತನ್ನವರ ಒಳಿತಿಗೆ ದುಡಿದರಂದು ತನ್ನವರಿಗೋ ಇಂದು ವಿಚಾರಿಸಲು ಸಮಯಸಾಲದಾಗಿದೆಬೆಳಗಾಯಿತೆಂದರೆ ಮತ್ತದೇ ಗೋಳು ನೋವಿನ ಕಥೆಕೇಳಿ ಕೇಳಿಸಾಕಾದಂತೆಎಲ್ಲರದೂ ಒಂದೊಂದು ವ್ಯಥೆಬಾಳ ಬೆಳಗು ಮಧ್ಯಾಹ್ನದಿ ಪಟ್ಟ ಅವಿರತ ಶ್ರಮದಿಫಲವಾಗಿ ಇಳಿಸಂಜೆಯ ಕಳೆಯಬೇಕಿದೆ ವೃದ್ದಾಶ್ರಮದಿಏನಿದು ಹಣೆಬರಹವೊ ಕೊನೆಬೇಕಿದೆ ಈ ನೋವಿಗೆ ಬಂದಪ್ಪಿಕೊಳ್ಳುವ ಸಾವಿಗೆ...

----------------------------------

ನೋಂದಣಿ ಐಡಿ : KPF-S1-5775

0
Total Votes
15
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!