ನನ್ನೋಲವಿನ ಸೂರ್ಯ
ರಚನೆ : ತೇಜಸ್ಸಿನಿ ರಾಜೇಂದ್ರ ಲೋಕುರೆ
----------------------------------
ಎಳೇ ಬಿಸಿಲ ದಾರಿಯಲ್ಲಿ ಜೊತೆಯಾದ ಸೂರ್ಯನು ಪ್ರತಿ ಹೆಜ್ಜೆಗೂ ನೆರಳಾಗಿ ನನ್ನ ಹಿಂಬಾಲಿಸಿ ಬರುವನು ಅಡ್ಡ ಗೋಡೆಗಳಿಗೆ ಮರೆಯಾಗಿ ಮತ್ತೆ ಜೊತೆಯಾಗುವನು ಬೆಂಬಿಡದೆ ಹಿಂಬಾಲಿಸುವ ತುಂಟ ಪೋರನವನು ಮುಸ್ಸಂಜೆಗೆ ಮಸುಕಾಗಿ ಮೋಡದಲ್ಲಿ ಅವಿತನು ಮತ್ತೆ ಸಿಗುವ ಬರವಸೆಯಲ್ಲಿ ನಿದ್ರೆಗೆ ಜಾರುವನು.
----------------------------------
ನೋಂದಣಿ ಐಡಿ : KPF-S1-5643
