ನನ್ನ ಪರಿಧಿ

1.

ಸಂವೇದನೆ   ತುಂಬಿದ

ಈ   ಭಾವಯಾನದಲ್ಲಿ

ನಮ್ಮ   ಅಸ್ತಿತ್ವವೇ

ಒಂದು   ಮೂಲ  ಮಂತ್ರವಾಗಿರಲಿ

2.

ನೀ   ನಕ್ಕರೆ

ಅದೇ  ತಂಗಾಳಿ

ನೀ   ಮುನಿದರೆ

ಅದೇ  ಬಿರುಗಾಳಿ

3.

ಒಲವೆಂಬ  ಹಣತೆಗೆ

ಜಿನುಗಬೇಕು  ಎಣ್ಣೆ

ಬದುಕೆಂಬ  ಬಂಡಿಗೆ

ಒಸರಬೇಕು  ಚಿಲುಮೆ

4.

ದಂಪತಿಗಳ  ಸರಸ ಸಲ್ಲಾಪದ  ನಡುವೆ

ಜೀವನದ   ಏಳುಬೀಳುಗಳ  ಸುಖದುಃಖಗಳ

ಸರಿದೂಗಿಸಿ  ನಡೆಯುವದೇ

ದಾಂಪತ್ಯ