ಜೀವಿಸಿಬಿಡು ಬದುಕಿದಷ್ಟು ದಿನ

ನಾವು ಯಾವಾಗಲೂ ಗುನುಗುವೆವು ಪಟ್ಟ
ಕಷ್ಟಗಳ ಎಲ್ಲರ ಮುಂದೆ…
ಇಂದಿನ ಸುಖವ ಮರೆತು!!!!

ಮಾಳಿಗೆಯ ಮೇಲೆ ನಿಂತು ಯೋಚಿಸುವೆ
ಏಕೆ? ಬರುವ ಗಾಳಿಯೂ ಕದ್ದು ನಾಲಿಗೆಯ
ಚಾಚಿ ದಬ್ಬೀತು ಕೆಳಗೆ!!!

ನಮಗಷ್ಟೆ ದೇವರಿತ್ತ ವರ ಇನ್ನೊಬ್ಬರಿಗೆ
ಶಾಪ ಹಾಕುವುದ! ನೋಡಾ ನೊಂದು ಬೆಂದರೂ
ಪ್ರಾಣಿಗಳು ಯಾವೊತ್ತೂ ಹಾಕಲಿಲ್ಲ ಶಾಪ!!

ಭೂಮಿ ಈಗ ಸ್ವಚ್ಛಂದವಾಗಿ ಹಾಡುತಿದೆ
ಯುಗಾದಿಯ ಹಾಡ!ಅದು ಮರೆತೆಹೋಯಿತು
ಅನುಭವಿಸಿದ ಬರಗಾಲದ ದಿನಗಳ!!!

ಪ್ರತಿ ಮರವೂ ಹೇಳುವುದು ಹೊಸ ಸಂಗೀತವ.
ಏರುತಿದೆ ದಿಬ್ಬದ ಮೇಲೆ
ಜಗದ ಪರಿವೆಯಿಲ್ಲದೇ ಸುಖದಿ ಕುಣಿಯುತ!!