ಕಾವ್ಯ ಡಿಂಡಿಮ ಪ್ರಶಸ್ತಿ 2021

ರೋಸ್ಟ್ರಮ್ ಡೈರಿಸ್ ಸಾರಥ್ಯದಲ್ಲಿ ನ್ಯಾನೋ ಕಥೆಗಳು ಸಮರ್ಪಿಸುವ ವಾರ್ಷಿಕ ಪ್ರಶಸ್ತಿ ಕಾವ್ಯ ಡಿಂಡಿಮ ಪ್ರಶಸ್ತಿ. ಇದೊಂದು ಜಾಗತಿಕ ಸ್ಪರ್ಧೆಯಾಗಿದ್ದು, ನಿಮ್ಮ ಸಲ್ಲಿಕೆಯನ್ನು ನಮಗೆ ಕಳುಹಿಸಲು ಕೊನೆಯ ದಿನಾಂಕ ಅಕ್ಟೋಬರ್ 31. ನವಂಬರ್ ತಿಂಗಳಿನಲ್ಲಿ ಕಾವ್ಯ ಡಿಂಡಿಮ ಪ್ರಶಸ್ತಿಯ ಘೋಷಣೆಯನ್ನು ಮಾಡಲಾಗುವುದು. ಮನದ ಭಾವಗಳಿಗೆ ಅಕ್ಷರಗಳ ರೂಪ ಕೊಟ್ಟು, ಶಬ್ದಗಳ ಹಂದರ ಹಾಕಿ, ಪ್ರಾಸ- ನ್ಯಾಸಗಳೊಡನೆ ಹೆಣೆವ ವಿಶಿಷ್ಟ ಸಾಹಿತ್ಯ ಪ್ರಕಾರವೇ ಕವನಗಳು. ನವ್ಯಸಾಹಿತ್ಯದಲ್ಲಿ ಕವನಗಳದ್ದೇ ರಾಜ್ಯಭಾರ. ಅದೆಷ್ಟೋ ಕವನಗಳು ಇಂದು ರಾಗಕ್ಕೆ ಹೊಂದಿಕೊಂಡು, ಮನಸ್ಸಿನಲ್ಲಿ ಅಚ್ಚಳಿಯದೇ ಉಳಿದ ಹಾಡುಗಳಾಗಿವೆ. ಅಂತಹ ಕವನಗಳನ್ನು ಬರೆಯುವ ಪ್ರತಿಭೆ ನಿಮ್ಮಲ್ಲಿದ್ದರೆ, ನಮ್ಮ ವೇದಿಕೆ ನಿಮಗಾಗಿಯೇ ಮಾಡಲ್ಪಟ್ಟಿದೆ.

  1. ಸ್ಪರ್ಧೆಗೆ ಕಳುಹಿಸುವ ಕವನಗಳು ಸ್ವಂತ ರಚನೆಯಾಗಿರಬೇಕು ಹಾಗು ಕನ್ನಡದಲ್ಲಿಯೇ ಇರಬೇಕು.
  2. ನೀವು ಕಳುಹಿಸುವ ಕವನಗಳು ಈ ಮೊದಲು ಯಾವುದೇ ಪತ್ರಿಕೆ, ನಿಯತಕಾಲಿಕೆ, ಬ್ಲಾಗ್, ಜಾಲತಾಣ, ಸಾಮಾಜಿಕ ಜಾಲತಾಣಗಳು, ಅಂತರ್ಜಾಲ ಹೀಗೆ ಎಲ್ಲಿಯೂ ಕೂಡ ಪ್ರಕಟ ಅಥವಾ ಪ್ರಸಾರ ಆಗಿರಬಾರದು.
  3. ನೀವು ಬರೆದ ಕವಿತೆಯು ಯಾವುದೇ ವಿಷಯದ್ದಾಗಿರಬಹುದು ಆದರೆ ೨೦೦ ಪದಮಿತಿಯಲ್ಲಿರಬೇಕು. ಅಪೂರ್ಣ ಕವನಗಳನ್ನು ಸ್ಪರ್ಧೆಗೆ ಪರಿಗಣಿಸಲಾಗುವದಿಲ್ಲ.
  4. ಸ್ಪರ್ಧೆಯಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವದಿಲ್ಲ.
  5. ಒಬ್ಬರು ಗರಿಷ್ಠ ಎರಡು ಕವನಗಳನ್ನು ಕಳುಹಿಸಬಹುದು. ಒಮ್ಮೆ ಕಳುಹಿಸಿದ‌ ಕವನಗಳನ್ನು ಸ್ಪರ್ಧೆಯ ಯಾವುದೇ ಅವಧಿಯಲ್ಲಿ ಹಿಂಪಡೆಯುವಂತಿಲ್ಲ. 2 ಕ್ಕಿಂತ ಹೆಚ್ಚು ಕವನಗಳನ್ನು ಕಳುಹಿಸಿದ್ದ ಪಕ್ಷದಲ್ಲಿ ನಿಮ್ಮ ನೋಂದಣಿಯನ್ನು ತಡೆಹಿಡಿಯಲಾಗುವುದು.
  6. ಸ್ಪರ್ಧೆಯ ಕುರಿತಾದ ಯಾವುದೇ ನಿರ್ಣಯಗಳಲ್ಲಿ ಆಯೋಜಕರ ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ.
  7. ನಿಮ್ಮ ಕವನದ ಜೊತೆಗೆ ನಿಮ್ಮ ಭಾವಚಿತ್ರ, ಮೊಬೈಲ್ ಸಂಖ್ಯೆ, ಮಿಂಚಂಚೆ ವಿಳಾಸ (ಇಮೇಲ್ id) ವನ್ನು ಕಡ್ಡಾಯವಾಗಿ ನೀಡಬೇಕು.
  8. ಭಾಗವಹಿಸಲು ಕೊನೆಯ ದಿನಾಂಕ: ಅಕ್ಟೋಬರ್ 31, 2021
  9. ನಾಡಿನ ಪ್ರಖ್ಯಾತ ಬರಹಗಾರರು ಹಾಗೂ ಕವಿಗಳು ವಿಜೇತರನ್ನು ಆಯ್ಕೆ ಮಾಡುತ್ತಾರೆ.
  10. ತಮ್ಮ ಸ್ವರಚಿತ ಕವನವನ್ನು ಕಳುಹಿಸಿದ ನಂತರ ಸ್ಪರ್ಧಿಗಳು ತಮ್ಮ ಕವನದ ಕಿರು ದೃಶ್ಯಕಾವ್ಯವೊಂದನ್ನು (ವಿಡೀಯೋ) ಮಾಡಿ kavyadindima@gmail.com ಗೆ ಕಳುಹಿಸಬಹುದು. ಕಳುಹಿಸುವಾಗ ಹೆಸರು, ಕವನದ ಶೀರ್ಷಿಕೆ, ನಿಮ್ಮ ದೂರವಾಣಿ ಸಂಖ್ಯೆ ಹಾಗೂ ವಾಟ್ಸಪ್ಪ್ ಸಂಖ್ಯೆಯನ್ನು ಕಳುಹಿಸಿ. (ದೃಶ್ಯಕಾವ್ಯವನ್ನು ಮಾಡುವ ವಿಭಾಗವನ್ನು ನಿಮ್ಮ ಇಚ್ಛೆಗೆ ಬಿಟ್ಟಿದುದಾಗಿರುತ್ತದೆ. ವಿಡಿಯೋ ಮಾಡದೆಯೂ ನೀವು ಕಾವ್ಯ ಡಿಂಡಿಮ ಸ್ಪರ್ಧೆಯಲ್ಲಿ ಭಾಗವಹಿಸಬಹುದು) . ಬರೀ ದೃಶ್ಯಕಾವ್ಯವನ್ನು ಕಳುಹಿಸಿದರೆ, ನಿಮ್ಮ ಸಲ್ಲಿಕೆಯನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ದೃಶ್ಯಕಾವ್ಯದೊಂದಿಗೆ ಕವನವನ್ನು ಕಳುಹಿಸುವುದು ಅನಿವಾರ್ಯ.
  11. ಅರ್ಜಿಯು ನಿಯಮಗಳ ಕೊನೆಯಲ್ಲಿದೆ. ಅಲ್ಲಿ ನಿಮ್ಮ ಅರ್ಜಿಯನ್ನು ಸಲ್ಲಿಸಬಹುದು.
  12. ನಿಮ್ಮ ಸಲ್ಲಿಕೆಯನ್ನು ಸಲ್ಲಿಸಿದ 48 ಗಂಟೆಗಳಲ್ಲಿ ನಿಮ್ಮ ಕವನವು ನಮ್ಮ ವೆಬ್ಸೈಟ್ ನಲ್ಲಿ ಕಾಣಿಸುತ್ತದೆ. ಜನಮೆಚ್ಚಿದ ಕವಿತೆಯ ಪ್ರಶಸ್ತಿಯು ನಿಮಗೆ ಬಂದಿರುವ ವೋಟುಗಳ ಆಧಾರದ ಮೇಲಿರುತ್ತದೆ. ಜನಮೆಚ್ಚಿದ ಕವಿತೆಯ ಪ್ರಶಸ್ತಿಯ ಮತದಾನವು ಅಕ್ಟೋಬರ್ 31, 2021 ರಂದು ಕೊನೆಗೊಳ್ಳುತ್ತದೆ. ನಿಮ್ಮ ಕವಿತೆಗೆ ಮತ ಹಾಕಲು ಈ ಲಿಂಕ್‌ಗೆ ಭೇಟಿ ನೀಡಿ www.nanokathegalu.com/category/kavyadindima2/   [ವಿಶೇಷ ಟಿಪ್ಪಣಿ : ಯಾವುದೇ ರೀತಿಯ ನಕಾರಾತ್ಮಕ ತಂತ್ರಗಳಿಗೆ ಅವಕಾಶವಿರುವುದಿಲ್ಲ. ಅಂತಹ ಸಂದರ್ಭಗಳು ಕಂಡುಬಂದಲ್ಲಿ ಅಥವಾ ಯಾವುದೇ ರೀತಿಯ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಈ ಪ್ರಶಸ್ತಿಯನ್ನು ತಡೆಹಿಡಿಯಲಾಗುವುದು]
  13. ನಿಮ್ಮ ಸಲ್ಲಿಕೆಯು ನಮಗೆ ಬಂದ 48 ಗಂಟೆಗಳೊಳಗಾಗಿ ನಿಮ್ಮ ಸಲ್ಲಿಕೆಯ ತಲಪುವಿಕೆ ಹಾಗೂ ಪ್ರಕಟಣೆಯ ಕುರಿತು ನಿಮಗೊಂದು ಮಿಂಚಂಚೆ ಬರುತ್ತದೆ.
  14. ನಿಮ್ಮ ಆಯ್ಕೆಯು ಪೂರ್ತಿಯಾಗಿ ಅಧಿಕೃತವಾದಾಗ ನಮ್ಮಿಂದ ನಿಮಗೆ ಮಿಂಚಂಚೆ ಬರುತ್ತದೆ. ಜೊತೆಗೆ ಎಲ್ಲ ರೀತಿಯ ಫಲಿತಾಂಶದ ಮಾಹಿತಿಯನ್ನು ನಿಮ್ಮ ಮಿಂಚಂಚೆಗೆ ಕಳುಹಿಸಲಾಗುವುದು. ಎಲ್ಲ ವಿಜೇತರಿಗೆ ವಿಶೇಷ ಪ್ರಶಸ್ತಿಯನ್ನು ಕಾವ್ಯ ಡಿಂಡಿಮ ಪ್ರಶಸ್ತಿ ಪತ್ರದೊಂದಿಗೆ ನೀಡಲಾಗುವುದು.
ಬಹುಮಾನಗಳು:
  • ಮೊದಲ ಬಹುಮಾನ ಗಳಿಸಿದ ಕವಿತೆಗೆ ‘ಕಾವ್ಯ ಡಿಂಡಿಮ ಪ್ರಶಸ್ತಿ‘ ಕೊಟ್ಟು ಗೌರವಿಸಲಾಗುವುದು. ಜೊತೆಗೆ ಪ್ರಶಸ್ತಿ ಪತ್ರ ಹಾಗೂ 1000 ರೂ ಮೌಲ್ಯದ ಪುಸ್ತಕಗಳನ್ನು ಮೊದಲ ಬಹುಮಾನವಾಗಿ ನೀಡಲಾಗುವುದು.
  • ಎರಡನೇ ಬಹುಮಾನ ಗಳಿಸಿದ ಕವಿತೆಗೆ ಪ್ರಶಸ್ತಿ ಪತ್ರ ಹಾಗು ಪುಸ್ತಕಗಳನ್ನು ನೀಡಲಾಗುವುದು.
  • ಜನಮೆಚ್ಚಿದ ಕವಿ-ಕವಿತೆ – ನಮ್ಮ ವೆಬ್ಸೈಟ್ ನಲ್ಲಿ ನಿಮ್ಮ ಕವನಗಳಿಗೆ ಬರುವ ವೋಟುಗಳ ಆಧಾರದ ಮೇಲೆ ಈ ಪ್ರಶಸ್ತಿಯ ವಿಜೇತರನ್ನು ನಿರ್ಣಯಿಸಲಾಗುತ್ತದೆ. ಯಾವುದೇ ರೀತಿಯ ನಕಾರಾತ್ಮಕ ತಂತ್ರಗಳಿಗೆ ಅವಕಾಶವಿರುವುದಿಲ್ಲ. ಅಂತಹ ಸಂದರ್ಭಗಳು ಕಂಡುಬಂದಲ್ಲಿ ಅಥವಾ ಯಾವುದೇ ರೀತಿಯ ತಾಂತ್ರಿಕ ತೊಂದರೆಗಳು ಉಂಟಾದಲ್ಲಿ ಜನಮೆಚ್ಚಿದ ಕವಿ-ಕವಿತೆ ಪ್ರಶಸ್ತಿಯನ್ನು ತಡೆಹಿಡಿಯಲಾಗುವುದು.
  • ಆಯ್ಕೆಯಾದ ಮೊದಲ 100 ಕವನಗಳಿಗೆ ರೋಸ್ಟ್ರಮ್ ಪ್ರಕಾಶನದ ಅಡಿಯಲ್ಲಿ ಇ- ಪುಸ್ತಕವನ್ನು ನಮ್ಮ ರೋಸ್ಟ್ರಮ್ ಮೊಬೈಲ್ ಆಪ್ ಹಾಗು ರೋಸ್ಟ್ರಮ್ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು. (ಬರಹಗಾರರ ಅನುಮತಿಯೊಂದಿಗೆ)
  • ಅತ್ಯುತ್ತಮ ದೃಶ್ಯಕಾವ್ಯ ಪ್ರಶಸ್ತಿಯು ದೃಶ್ಯಕಾವ್ಯದ ಆಧಾರದ ಮೇಲೆ ಕೊಡಲಾಗುವುದು. ಭಾಷಾ ಪ್ರೌಢಿಮೆ, ಪ್ರದರ್ಶನ ಶೈಲಿ, ಉಚ್ಚಾರಣೆ ಇತ್ಯಾದಿಗಳನ್ನು ಮಾನದಂಡಗಳನ್ನಾಗಿರಿಕೊಂಡು ಈ ಪ್ರಶಸ್ತಿಯನ್ನು ನೀಡಲಾಗುವುದು. ನಿಯಮ 10ರ ಪ್ರಕಾರ ನಾವು ದೃಷ್ಯಕಾವ್ಯಕ್ಕೂ ಸಹ ಒಂದು ವಿಶೇಷ ಪ್ರಶಸ್ತಿಯನ್ನು ನೀಡುತ್ತಿದ್ದೀವಿ. ಹಾಗಾದರೆ ನೀವು ನಿಮ್ಮ ವಿಡಿಯೊವನ್ನು ಕಳುಹಿಸುವಿರಾ?
  • ಹಾಗಾದರೆ ಇನ್ಯಾಕೆ ತಡ? ಈ ಕೂಡಲೇ ಈ ಕೆಳಗಿನ ಅರ್ಜಿಯನ್ನು ಭರ್ತಿ ಮಾಡುವ ಮೂಲಕ ನಿಮ್ಮ ಸಲ್ಲಿಕೆಯನ್ನು ಸಲ್ಲಿಸಿ!!
  • ಸ್ಪರ್ಧೆಯ ಮುಂದಿನ ಸೂಚನೆಗಳಿಗೆ ನ್ಯಾನೋ ಕಥೆಗಳು ಇನ್ಸ್ಟಾಗ್ರಾಂ ಮುಖಪುಟದಲ್ಲಿನಿರೀಕ್ಷಿಸಿ. ಇನ್ಸ್ಟಾಗ್ರಾಂ ಲಿಂಕ್ : www.instagram.com/nanokathegalu

                                                                             ನಿಮ್ಮ ಕವಿತೆಯನ್ನು ಸಲ್ಲಿಸಲು ಕೆಳಗಿನ ಫಾರ್ಮ್ ಅನ್ನು ಭರ್ತಿ ಮಾಡಿ

[acfe_form name=”kavya-dindima-prashasti”removethisline]
 
 
 
48