ಬಯಕೆ
ರಚನೆ : ಸುರೇಶ ಯ ಗೋವನಕೊಪ್ಪ
----------------------------------
ನನಗೆ ಕಾಡುತ್ತಿದೆ ನಿನ್ನ ನೋಡುವ ಬಯಕೆ ಪ್ರೀತಿ, ಪ್ರೇಮ ಕೊಟ್ಟ ನನ್ನ ಹೃದಯಕೆ ಗೆಳತಿ ನಾನೊಂದು ತೀರ ಹೋದೆಯಲ್ಲ ನೀ ಬಹುದೂರ ಏನೆಂದು ಹೇಳಲಿ ನನ್ನ ಅಂತರಾಳದ ಮನಕೆ ಸೋತು ಹೋದ ನಿನ್ನ ಯೌವ್ವನದ ಸೌಂದರ್ಯಕ್ಕೆ ಮೆಲ್ಲ ಮೆಲ್ಲನೆ ಮಾತನಾಡುವ ನಿನ್ನ ಕೆಂದುಳ್ಳ ತುಟಿಗಳಿಗೆ ಪಳ ಪಳನೇ ಹೊಳೆಯುವ ನಿನ್ನ ನಯನಕೆ ಗಲ್ ಗಲ್ ಮಾಡುವ ನಿನ್ನ ಕಾಲಿನ ಗೆಜ್ಜೆ ನಾದಿಗೆ ಸಳ್ ಸಳ್ ಮಾಡುವ ನಿನ್ನ ಕೈ ಬಳೆಗಳಿಗೆ ನೀನೇ ನನ್ನ ಪ್ರಾಣ ಎಂದು ನಾನು ನಂಬಿದೆ ಪ್ರಾಣ ಹೋಗುವಂತೆ ನನ್ನ ಮನ ಕಾಡುತ್ತಿದೆ ನನ್ನ ಮನಸ್ಸಿಗೆ ಹೇಳಿತು ನನ್ನ ಕ್ರೋಧದ ಕ್ಷಣ ಸಾಕು ಬಿಡು ನಿನ್ನ ಬಯಕೆ ಈಡೇರುವುದಿಲ್ಲ ಪ್ರತಿ ದಿನ
----------------------------------
ನೋಂದಣಿ ಐಡಿ : KPF-S1-7149
