ಮರಣದ ನಂತರ ಅವನೊಂದಿಗೆ
ರಚನೆ : ಪ್ರಿಯಾ
----------------------------------
ಮೌನದಲ್ಲಿಯೇ ಮಾತನಾಡುವಾಸೆ ನಿನ್ನೊಂದಿಗೆ ಬಾನ ಚಂದ್ರಮನ ಮಡಿಲಲ್ಲಿ ಕಣ್ಣ ತುಂಬಾ ಧ್ಯಾನಿಸುವಾಸೆ ನಿನ್ನನೇ ಚುಕ್ಕಿ ತಾರೆಗಳ ಬೆಳಕಲ್ಲಿ ಮೇಘಗಳ ಚಪ್ಪರದಡಿ ಗುಡಿಸಲೊಂದ ಕಟ್ಟಿ ಇದ್ದು ಬಿಡೋಣ ಗೆಳೆಯ ಅಲ್ಲೇ ನೀಲ ಆಕಾಶದ ಹೊಸ್ತಿಲಲ್ಲಿ ಸೂರ್ಯ ಚಂದ್ರರೇ ತಾಯಿ ತಂದೆ ನಮಗಲ್ಲಿ ಚುಕ್ಕಿ ತಾರೆಗಳೇ ಬಂಧುಬಳಗ ಆಕಾಶವೇ ನಮ್ಮ ಮನೆ ಎನ್ನ ಪಾಲಿಗದೇ ಅರಮನೆ ಮರಣದಲ್ಲೂ ಜೀವಿಸುವೆ ನಿನ್ನೊಂದಿಗೆ ತೊರೆದು ಸೃಷ್ಟಿ ಗೋಜಿನ ಕಲ್ಪನೆ
----------------------------------
ನೋಂದಣಿ ಐಡಿ : KPF-S1-7143
