Submission 26829

ಪೂರ್ಣವಿರಾಮ

ರಚನೆ : ಡಾ ನಮಿತಾ ಟಿ

----------------------------------

ಒಮ್ಮೆ ಪೂರ್ಣ ವಿರಾಮವಿಟ್ಟೆ ಕಣ್ಣೆಲೆಯಂಚಿನ ಮರೆಯಲಿ ಕುಳಿತು ನನಸಾಗದ ಕನಸು ಕಾಣುವ ಮನಸಿಗೆ........ ಒಮ್ಮೆ ಪೂರ್ಣ ವಿರಾಮವಿಟ್ಟೆ ಕಂಡವರ ಬಯಕೆಗಳ ತಾಕಲಾಟಕೆ ತಗ್ಗಿ ಬಗ್ಗಿ ನಡೆಯುವ ನಡತೆಗೆ..... ಒಮ್ಮೆ ಪೂರ್ಣ ವಿರಾಮವಿಟ್ಟೆ ಬದುಕಿನ ಪುಸ್ತಕದ ಕೊನೆಯ ಪುಟದ ಉತ್ತರ ತಿಳಿಯುವ ಹಂಬಲಗಳಿಗೆ....... ಒಮ್ಮೆ ಪೂರ್ಣ ವಿರಾಮವಿಟ್ಟೆ ಕಿಂಚಿತ್ತೂ ನಿಜವಲ್ಲದ , ಹುಸಿ ಮನಸಿನ ಬಂಧಗಳಿಗೆ......

----------------------------------

ನೋಂದಣಿ ಐಡಿ : KPF-S1-7152

0
Total Votes
11
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!