Submission 26817

ಒಲವ ಪ್ರೀತಿ

ರಚನೆ : ರಜನಿ ಮಹಾಂತೇಶ್

----------------------------------

ಓ ಪಿಸುದನಿಯೆ ಪಿಸುಗುಟ್ಟು ಒಮ್ಮೆ ಅವನೆದೆಯಲಿ ನನ್ನ ಪ್ರೀತಿಯ ಭಾವನೆ ನಿನ್ನ ನೋಟದಲ್ಲಿ ಅದೇನೊ ಸೆಳೆತ ಮತ್ತೆ ತಿರುಗಿ ನೋಡುವ ಭೋರ್ಗರೆತ ಕಾಣದೂರಿನ ಚಂದಿರನ ಚಂದವು ನಿನಗೆ ಸಾಟಿಯೇ ಗೆಳೆಯ ಚಿಗುರು ಮೀಸೆಯ ಮರೆಯಲ್ಲಿ ಕಂಡೆ ನಾ ಮಿಗುನುಗುವ ಮುಗುಳ್ನಗೆಯ ಮೈ ಮರೆತಿ ನಾ ಆ ನಗುವಲ್ಲಿ ಅರಳುವ ಹೂ ಸಾಟಿಯೇ ನಿನಗಿಲ್ಲಿ ಸೊಗಸಾದ ನಿನ್ನ ಮಾತು ಕೇಳುತಲಿ ಕುಳಿತೆ ನಾ ಸೋತು ಒಪ್ಪಿಬಿಡು ನನ್ನ ಒಲವ ಕಣ್ರೆಪ್ಪೆಯಂತೆ ಕಾಪಾಡುವೆ ಚೆಲುವ

----------------------------------

ನೋಂದಣಿ ಐಡಿ : KPF-S1-7156

1
Total Votes
12
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!