ದೂರ ಸರಿದನು ದೂರುಗಳ ನೀಡದೇ ನನ್ನವನು
ರಚನೆ : ಕಾವೇರಿ ಬೈಲಪ್ಪ ಗೌರಿ
----------------------------------
ನನ್ನವನು ತುಸು ಹೆಚ್ಚೇ ನನ್ನನ್ನು ಕಾಡಿದವನು ನನ್ನವನು ತುಸು ಹೆಚ್ಚೇ ನನ್ನನ್ನು ಪ್ರೀತಿಸಿದವನು ನನ್ನವನು ಚಂದ್ರನಂತೆ ಬಹು ದೂರವೇ ಉಳಿದುಕೊಂಡವನು ಎಲ್ಲರಿಗಿಂತ ಹೆಚ್ಚಾಗಿ ಕಾಳಜಿ ವಹಿಸಿದವನು ನನ್ನ ಕುಟುಂಬವನ್ನು ನನಗಿಂತ ಹೆಚ್ಚಾಗಿ ಪ್ರೀತಿಸಿದವನು ನನ್ನವನು ನನ್ನೆಲ್ಲಾ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸಿದವನು ಆದರೂ ದೂರುಗಳ ನೀಡದೇ ಅತೀ ದೂರವೇ ಹೋದನು...... ನನ್ನವನು ನನ್ನ ಆಶಯಗಳಿಗೆ ಹೆಗಲಾಗಿದ್ದವನು ನನ್ನವನು ನನ್ನಲ್ಲಿ ತನ್ನ ತಾಯಿಯ ರೂಪ ಕಂಡವನು ನನ್ನವನು ಬಾಯ್ತುಂಬಾ ಅವಳು ನಿಷ್ಕಲ್ಮಶ ಗುಣದವಳೆಂದು ಹೊಗಳಿದವನು ಪತಿವ್ರತೆ ಎಂದು ಕೊಂಡದಿದವನು ಆದರೂ ದೂರವೇ ತಳ್ಳಿದನು ಅವಳು ಬೇಡವೆಂದು ನನ್ನವನು ನನ್ನೆಲ್ಲಾ ಕನಸುಗಳ ಹೊತ್ತು ಮೆರೆದವನು ನನ್ನವನು ಕೊನೆಗೆ ಕನಸುಗಳನ್ನು ಸ್ವಪ್ನವಾಗಿಯೇ ಉಳಿಸಿ ಹೋದವನು ನನ್ನ ಕಲ್ಪನೆಗೂ ಮೀರಿ ನನ್ನನು ಮೆಚಿಕೊಂಡವನು ಕಾರಣವೇ ಹೇಳದೇ ನನ್ನ ದೂರ ತಲ್ಲಿದವನು ನಂಬಿರುವೆ ನಮ್ಮಿಬ್ಬರ ಪ್ರೀತಿ ಶಾಶ್ವತವೆಂದು ಆದರೂ ನನ್ನವನು ನಾ ಬೇಡವೆಂದು ಹೇಳಿದವನು ನನ್ನವನು ಹುಸಿ ಮುನಿಸಲ್ಲೂ ತುಸು ಕಾಳಜಿ ತೋರಿದವನು ನನ್ನವನು ಹಸಿ ನೋವಲ್ಲಿ ನನ್ನನ್ನು ಕೈ ಬಿಟ್ಟವನು ಇಂದಿಗೂ ಕಾಯುತಿದೆ ಈ ಜೀವ ಆ ಜೀವನಿಗಾಗಿ ......
----------------------------------
ನೋಂದಣಿ ಐಡಿ : KPF-S1-7139
