Submission 26769

ಭಾರತವೇ ನಿತ್ಯಸತ್ಯ

ರಚನೆ : ನಾಗರಾಜ್ ಇಟ್ಟಿಗಪ್ಪ

----------------------------------

ಭಾರತೀಯರು ನಾವೆಲ್ಲಾ ಭಾರತವೆ ನಮಗೆಲ್ಲಾ l ದೇವತೆಗಳ ನೆಲೆನಾಡಿದು ಸ್ವರ್ಗಕ್ಕಿಂತ ಕೀಳಲ್ಲ ll ಯಾವುದು ಸ್ವರ್ಗ ಮತ್ಯಾವುದು ನರಕ ಈ ಸೃಷ್ಟಿಯಲಿ ಸ್ವರ್ಗನರಕಗಳೆಂದು ಬೇರಿಲ್ಲ ತಿಳಿಯಿರೊ ! ಎಲ್ಲವೂ ಅಡಗಿದೆ ಅವರವರ ಕಾಯಕದಲಿ ಕಾಣಿರೊ ದೇವನದಿ ಒಂದು ಜೀವನದಿ ಮತ್ತೊಂದು , ಎನಿತು ಜನರ ಜೀವ ಕಾಯ್ವ ಆ ಜಲಧಾರೆಗಳೋ ಎಸ್ಟೊಂದು ? ಗಂಗಾ ಸ್ನಾನ ತುಂಗಾ ಪಾನ ಆಹಾ ! ಎನಿತು ರಮ್ಯವಯ್ಯ ! ಝಲ್ಲರಿ ಜಾಗಟೆಯ ನಿನಾದದೊಂದಿಗೆ ಓಂಕಾರ ವೇದ ಪುರಾಣಗಳ ನಿತ್ಯ ಪಾರಾಯಣ ಮಾಡಲ್ಪಡುವ ಸಾತ್ವಿಕರು ತುಂಬಿದ ಭಾರತಾಂಬೆಯ ಈ ಮಡಿಲೆ ನಿತ್ಯ ಸ್ವರ್ಗ ಸುಂದರ ಅಧಿಪತಿ ಪಶುಪತಿ ಗಣಪತಿಯೊಂದಿಗೆ ಮಂಜುನಾಥ ಸೋಮನಾಥ ವಿಶ್ವನಾಥನು ಎಲ್ಲೆಡೆ ನೆಲೆಸಿ ಎಲ್ಲರ ಜೀವಾತ್ಮವನು ಕಾಯ್ವ ಪರಮಾತ್ಮನ ಈ ತಾಣವೆ ನಿತ್ಯಸತ್ಯ .

----------------------------------

ನೋಂದಣಿ ಐಡಿ : KPF-S1-7145

0
Total Votes
9
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!