ಹಬ್ಬ
ರಚನೆ : ಮಾರುತಿ ಈ
----------------------------------
ಊರೆಲ್ಲ ಹಸಿರುಟ್ಟು ಅಲಂಕಾರವಾಗಿದೆ ಬಂಧು, ಬಳಗ, ನೆಂಟರಿಷ್ಟರ ಆಗಮನವಾಗಿದೆ ಹೊಸ ಧಿರಿಸುಗಳು ಆಲಂಗಿಸಿದೆ ಯುಗಾದಿಯು ಸಂಭ್ರಮದಿ ಮನೆ ಮಾಡಿದೆ ಮೂಕವಿಸ್ಮಿತನಾಗಿಸಿದೆ ಕಂಡು ಕಲರವ ಸರ್ವರ ಮುಖದಲ್ಲಿ ಮಂದಹಾಸವ ಖುಷಿಯಲ್ಲಿ ಬರಮಾಡಿ ಹೊಸ ವರುಷವ ಅನುಭವಿಸಿ ಇರುವೊಂದು ಜೀವನವ ಕಂಗೊಳಿಸಿವೆ ಹಸಿರು ತಳಿರು ತೋರಣ ಜೀವನವಾಗಿಸಿದೆ ಸಿಹಿ ಹೊರಣ ಖುಷಿಯಾಗಿಸಿದೆ ಮನದಂಗಣ ಸೃಷ್ಟಿಯಾಗಿದೆ ಹಬ್ಬದ ವಾತಾವರಣ
----------------------------------
ನೋಂದಣಿ ಐಡಿ : KPF-S1-7138
