ನೆನಪು
ರಚನೆ : ಎಸ್. ರೇಣುಕಾ
----------------------------------
ಸುಳಿಯ ಹಾಗೆ ಇದು ಹೊರ ಬರುವುದು ಹೇಗೊ ತಿಳಿಯದು ಪರರಿಗೆ ಹೇಳಲಾಗದ, ಗೊತ್ತಿರುವ ಗುಟ್ಟನ್ನು ತಟ್ಟಿ ಹರಿಸುವುದು ಮಧುರ - ಅಮಧುರಗಳ ಹೊನಲನ್ನು ಸವಿಯಲಾಗದು ಸರಳವಾಗಿ ಉಭಯವನ್ನೂ.. ಬೇಡುವುದು ಕೆಲವೊಮ್ಮೆ ಮುಗುಳು ನಗೆಯ, ಇನ್ನೊಮ್ಮೆ ಮೌಲ್ಯದ ನೇತ್ರಾ ವ್ಯಾಕುಲತೆಯ... ಇರುವಾಗ ಸುಮ್ಮನೆ, ಬರುವ ಈ ಹಡಗು, ಮರಳುವುದು ಬಿಟ್ಟು ದುಗುಡು .... ಜೊತೆಗೇ ವರ್ತಮಾನದ ಬೆಂಬಿಡದ ಅಗಡು ಒಮ್ಮೆ ತಂಪಾದ ತಂಗಾಳಿ ತೆರೆ , ಮತ್ತೊಮ್ಮೆ ತುಂಬಲಾರದ ಬಿರುಗಾಳಿ ಹೊರೆ ಅದೇ 'ನೆನಪು ' ಎಂಬ ತೊಡಕಿನ ಹೊಳೆ, ಮರೆಯಲಾಗದ ಹೃದಯದ ಮೊಟಕು ಮೊಳೆ.
----------------------------------
ನೋಂದಣಿ ಐಡಿ : KPF-S1-7133
