Submission 26729

ಅಮ್ಮ

ರಚನೆ : ಮುತ್ತಣ್ಣ

----------------------------------

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ. ನನ್ನಮ್ಮನನ್ನು ಹಾಗೆ ಹೇಳಲಾರೆ..... ಉಪ್ಪು ಬೇಕಾದಷ್ಟಿದ್ದರೇನು.. ಉಪ್ಪು ಕಡಿಮೆ ಆದರೆ ಅರುಚಿ.... ಹೆಚ್ಚಾದರೆ ಅಯ್ಯಯ್ಯೋ ಉಪ್ಪಿನಕಸ . ನಮ್ಮಮ್ಮ ಹೆಚ್ಚಾಗಿ ನನ್ನನ್ನು ಹಚ್ಚಿಕೊಂಡರೆ... ಪ್ರೀತಿ ಸಾಗರದಲ್ಲಿ ನಾ ತೇಲಾಡುವೆ.. ನನಗೇ ಅರ್ಥವಾಗದ ವಿಚಾರವೊಂದು..... ಈಗೀಗ ನನ್ನ ತಲೆ ಕೊರೆಯುತಿಹುದು. ಆಕೆಯ ಬುದ್ದಿಯ ಮಾತು ನನ್ನನ್ನು ಕೆರಳಿಸುತ್ತಿದೆ. ಹೆಚ್ಚು ಓದಿದ ನನಗೆ 'ನೀನ್ಯಾಕೆ ಹೀಗೆ?' ಎಂಬ ಮಿಂಚು ಎಲ್ಲೋ ಬಂದು ಹೋಗುತ್ತಿದೆ..... ಮಿಂಚು ಕಾರ್ಮೋಡವಾಗಿ ಮತ್ತೆ ಸಿಡಿಲು ಹೊಡೆದು ಪ್ರೀತಿ ಪ್ರೇಮಗಳ ಪ್ರವಾಹಕ್ಕೆ ಕೊಚ್ಚಿ... ಛೇ! ಅಮ್ಮನ ನಡೆ ನುಡಿ......ಮಧುರ.... ತ್ರಿಮಧುರ ಕೇಳಿ ಕೆರಳಿದರೆ ನೆಲೆ ತಪ್ಪಿತು ಲಾಲಿಸಿ ಮನಕೆ ಬಂದರೆ ಬದುಕು ಮಧುರ ಮೋಹಕವಾದೀತು.

----------------------------------

ನೋಂದಣಿ ಐಡಿ : KPF-S1-7130

0
Total Votes
11
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!