Submission 26715

ಮನದ ಬಯಕೆ

ರಚನೆ : ಬಸವಲಿಂಗಯ್ಯ ಎಂ

----------------------------------

ಬದಲಾಗು ನನ್ನೀ ಮನವೇ, ಬದಲಾಗು ಬದಲಾವಣೆ ಜಗದ ನಿಯಮ, ಬದಲಾಗು ಸ್ವಾರ್ಥ ಪ್ರೀತಿಯ ಮರಳಲ್ಲಿ ಹುದಿಗಿದ್ದು ಸಾಕು, ನಿಸ್ವಾರ್ಥಿಯ ಪ್ರೀತಿಯ ನದಿಯ ಸೇರಿ ಸಾಗರವ ಕಾಣು. ಅಪೇಕ್ಷಿತ ಸ್ನೇಹದ ವಿಕಿರಣಕ್ಕೆ ತುತ್ತಾಗಿದ್ದು ಸಾಕು, ನಿರಪೇಕ್ಷಿತ ಸ್ನೇಹಕ್ಕೆ ತಂಪಾದ ಗಾಳಿಯ ಸೊಂಕಿಸು. ಕಲ್ಪನೆಯ ಲೋಕದ ಕಗ್ಗತ್ತಲ ಆಲೋಚಿಸದೆ, ನೈಜತೆಯ ಲೋಕದ ಶುಭೋದಯವ ಅನುಸರಿಸು. ಉಲ್ಲಾಸ,ಉತ್ಸಾಹ, ಸಂತಸದ ಕ್ಷಣ ನಗುವಿಗೆ ಕಾಲಹರಣ ಮಾಡದೆ, ಗೌರವ,ನೆಮ್ಮದಿ, ಋಣಾನುಬಂಧಕ್ಕಾಗಿ ಕಾಲಭಕ್ಷಲನಾಗು. ನಿನ್ನೀ ನಯನದ ಮರುಳಿಗೆ ಬಲಿಮೀನಾಗದೆ, ತುಂಬು ಮನಸಿನ ಮರುಳಿಗೆ ನೀಲಿತಿಮಿಂಗಲನಾಗು. ಬದಲಾಗು ನನ್ನೀ ಮನವೇ, ಬದಲಾಗು ಇದನ್ನೆಲ್ಲಾ ಅರಿತ ನೀ, ಉಪಯೋಗಿಯಾಗು, ಬದಲಾವಣೆ ಜಗದ ನಿಯಮ, ನಿರಪಯೋಗಿಯಾಗದೆ ಬದಲಾಗು.

----------------------------------

ನೋಂದಣಿ ಐಡಿ : KPF-S1-7124

0
Total Votes
10
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!