ಭಾರತಾಂಬೆ ನೀ ತಬ್ಬಲಿ ಅಲ್ಲ
ರಚನೆ : ಯಲ್ಲಪ್ಪ ಮಾದರ
----------------------------------
ಭಾರತಾಂಬೆ ನೀಡಿದೆ ನಮಗೆಲ್ಲ ಸಿರಿ ಸಂಪತ್ತು ನೀನು ಹೇಳಿದೆ ಎಲ್ಲ ಮಕ್ಕಳು ನನ್ನ ಸ್ವತ್ತು ದುಷ್ಟ ರಾಜಕಾರಣದಿಂದ ತಂದಿರುವರು ನಿನಗೆ ಆಪತ್ತು ಭಯೋತ್ಪಾದನೆಯಿಂದ ನಡುಗುತಿದೆ ಇಡೀ ಜಗತ್ತು ಭಯದ ಉತ್ಪಾದಕರೇ ಭಯೋತ್ಪಾದಕರು ಇವರನ್ನು ಮೆಟ್ಟಿ ನಿಲ್ಲುವರೆ ನನ್ನ ದೇಶದ ಹೆಮ್ಮೆಯ ಸೈನಿಕರು ಪ್ರಾಣದ ಹಂಗು ತೊರೆದು ನಮ್ಮನ್ನೆಲ್ಲ ರಕ್ಷಿಸುವ ಶೂರರು ತ್ಯಾಗಕ್ಕೆ ಸಂಕೇತ ನಿಮ್ಮ ಹೆಸರು ನೀವು ನಮ್ಮ ದೇಶದ ಉಸಿರು ಸರ್ವರೂ ಜಾತಿ ಧರ್ಮದ ಗಲಭೆ ಬಿಡಿ ನಾಡ ರಕ್ಷಣೆಗಾಗಿ ಇರಲಿ ಎಲ್ಲರ ನುಡಿ ರಾಜಕಾರಣಿಗಳ ಹಿಂದೆ ಹೋಗಬೇಡಿ ಓಡಿ ಅವರವರ ಸ್ವಾರ್ಥಕ್ಕಾಗಿ ಜನರ ಮಧ್ಯೆ ಹಚ್ಚುವರು ಕಿಡಿ ಸರ್ವ ಜನಾಂಗದ ಶಾಂತಿಯ ತೋಟ ನನ್ನ ಭಾರತ ಇಲ್ಲಿ ನಾವೆಲ್ಲ ಬದುಕಬೇಕು ಸ್ನೇಹ ಪ್ರೀತಿ ಹಂಚುತ ನುಸುಳುಕೋರರ ವಿರುದ್ಧ ದಿಟ್ಟ ಹೆಜ್ಜೆ ಇಡುತ್ತ ರಾಷ್ಟ್ರರಕ್ಷಣೆಗೆ ಒಗ್ಗೂಡಿ ಎಲ್ಲರೂ ಮಾಡೋಣ ಶಪಥ
----------------------------------
ನೋಂದಣಿ ಐಡಿ : KPF-S1-7120
