Submission 26703

ಯುಗ ಪುರುಷರು

ರಚನೆ : ಎಂ. ಖಾಜಾವಲಿ ಬೇಗ್

----------------------------------

ಅಂಜದಿರು ಅಳುಕದಿರು ಎಂಬುವರು ಮಾನವರು, ನಡುನೀರ ಸುಳಿಯಲ್ಲಿ ಬಿಟ್ಟು ಅಳುಕಿಸುವರು ಈ ಮಾನವರು! ನಂಬುತಿರು ನಗುತಿರು ಎಂಬುವರು ಮಾನವರು, ನಂಬುತ ಮುನ್ನಡೆದಾಗ ನಿಂತು ನಗುತಿಹರು ಈ ಮಾನವರು! ದೇವನೊಬ್ಬನೆ ಎಂಬುವರು ಮಾನವರು, ದಿನಕ್ಕೊಂದು ದೇವರನು ಅರಸುವರು ಈ ಮಾನವರು! ಜಾತಿ-ಬೇಧ ಬೇಡ ಎಂಬುವರು ಮಾನವರು, ಸ್ವಜಾತಿಯ ಹೆಣ್ಣನು ವರಸುವರು ಈ ಮಾನವರು! ದ್ವೇಷಿಸದಿರು ದೂಷಿಸದಿರು ಎಂಬುವರು ಮಾನವರು, ದೂಷಿಸಿ ದ್ವೇಷಿಸಿ ಅಶಾಂತಿಯ ನಾಡನು ಕಟ್ಟುವರು ಈ ಮಾನವರು. ಒಂದೇ ತಾಯಿ ಮಕ್ಕಳು ಜಗದಗಲದ ಮಾನವರು ಎಂಬುವರು ಮಾನವರು, ಪ್ರಾಂತೀಯ ಪ್ರಾಂಗಣದ ಪ್ರೀತಿಯಲಿ ದಯಾದಿಗಳು ಈ ಮಾನವರು. ವಂಚಿಸದಿರು ಹಿಂಸಿಸದಿರು ಎಂಬುವರು ಮಾನವರು, ಪ್ರಣಯದಿ ವಂಚಿಸಿ ಹಿಂಸಿಸಿದರು ಈ ಮಾನವರು! ಯುಗ ಯುಗಗಳೆ ಕಳೆದರು ಯುಗಾದಿ ಮರಳಿ ಮರಳಿ ಬಂದರು ಬದಲಾಗದ ಯುಗ ಮಾನವರು!

----------------------------------

ನೋಂದಣಿ ಐಡಿ : KPF-S1-7128

1
Total Votes
9
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!