Submission 26699

ತಾಯಿಯೇ ದೇವರು

ರಚನೆ : ಜಿಬಲಪ್ಪ ಭಂಡಾರಿ ಬೆಂಡೆಬೆಂಬಳಿ

----------------------------------

ಜಗತ್ತಿನಲ್ಲಿವೇ ಮುಕ್ಕೋಟಿ ದೇವರು ಮಗುವಿಗೆ ತಾಯಿಯೇ ದೇವರು ಅಳುತ್ತಾ ಜಗತ್ತಿಗೆ ಕಾಲಿಟ್ಟ ನಾವು ಜನ್ಮ ನೀಡಲು ತಾಯಿ ಉಂಡಳು ನೋವು ಹೆತ್ತು, ಹೊತ್ತು ಸಾಕಿ ಸಲಹಿದಳು ಸುಖ, ದುಃಖ ಅನುಭವಿಸಿದಳು ಪ್ರೀತಿ, ವಾತ್ಸಲ್ಯದ ಕರುಣೆ ಮಗವಿಗೆ ಅದುವೇ ರಕ್ಷಣೆ ಚಿಕ್ಕವರಿದ್ದಾಗ ತಾಯಿ ಕಲಿಸುತ್ತಿದ್ದ ಆಟ ಮಗುವಿಗೆ ಅದುವೇ ಜೀವನದ ಪಾಠ ತಾಯಿ ಹೇಳಿದ ನೀತಿಯ ಪಾಠಗಳು ಮಗುವಿನ ಜೀವನದ ಆದರ್ಶಗಳು ತಾಯಿಗಿಂತ ದೊಡ್ಡವರು ಯಾರು? ದೇವರಿಗಿಂತ ದೊಡ್ಡವರು ತಾಯಿ ದೇವರು ಕಣ್ಣಿಗೆ ಕಾಣದ ಆ ದೇವರು ಕಣ್ಣಿಗೆ ಕಾಣಿಸುವ ತಾಯಿಯೇ ದೇವರು -ಜೆ. ಎಂ. ಭಂಡಾರಿ

----------------------------------

ನೋಂದಣಿ ಐಡಿ : KPF-S1-7127

0
Total Votes
10
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!