Submission 26697

ಬೆಳಕಿನ ಕವಿತೆ

ರಚನೆ : ರಾಜೇಶ್

----------------------------------

ಬಂದ ಬಂದ ಹಳದಿ ಮುಖ ಹೊತ್ತು ತಂದ ಮೂಡಣ ರವಿ..! ಸಕಲ ಜೀವರಾಶಿ; ಪ್ರಾರಂಭವಾಯಿತು ನೋಡಿ ದಿನದ ದಿನಚರಿ ..! ರವಿಯ ಮುಖ ನೋಡಿ ಅರಳಿ ನಿಂತ ಹಸಿರ ಎಲೆಗಳು ..! ಹಳದಿ ಮುಖ ನೋಡಿ ಕರಗಿತು ಎಲೆಯ ಬೆವರ ಹನಿಗಳು ..! ಮಣ್ಣಿನಲ್ಲಿ ಅರಿತಿಟ್ಟ ಬೀಜ ಎದ್ದು ನೋಡುತ್ತಾ ನಿಂತಿತು..! ಅದರ ಸುತ್ತ ಚಂಗನೆ ತೇವ ರವಿಯ ಹತ್ತಿರ ಹಾರಿತು ..! ನೆತ್ತಿ ಸೂರ್ಯನ ನೋಡಿ ಗಲಿಬಿಲಿ ಗೊಂಡು ಹಾರಿತು ಹಕ್ಕಿ..! ಪ್ರಾಣಿ, ಪಕ್ಷಿ, ಕೀಟ ಎಲ್ಲರಿಗೂ ವಿಶ್ರಾಂತಿ ಪಡೆಯಲು ನೆರಳು ದಕ್ಕಿ ..! ನೆತ್ತಿ ಸೂರ್ಯನ ಪ್ರಖರತೆಗೆ ಜೀವಿಗಳು ನೆರಳಿನ ಆಶ್ರಯ ಪಡೆದವು..! ಪ್ರಾಣಿ, ಪಕ್ಷಿ , ಕೀಟ ಎಲ್ಲವೂ ಮರಗಿಡಗಳ ಮಹತ್ವ ಅರಿತವು..! ಕಪ್ಪು ಮುಖದ ಮೋಡಗಳು ಎಲ್ಲರೂ ಸೇರಿ ಸೂರ್ಯನನ್ನು ಮುಚ್ಚಿ ಭುವಿಯನ್ನು ಕತ್ತಲೆಯ ಮಾಡಿದವು..! ರವಿಯು ಮೋಡಗಳನ್ನು ಸರಿಸಿ ಭೂಮಿಯ ಮೇಲಣ ತನ್ನ ಮಕ್ಕಳನ್ನು ಕಾತರದಿಂದ ನೋಡಿದನು..! ರವಿ ಮೋಡ ಸರಿಸಿದ್ದನು ನೋಡಿ ಮರಗಿಡ ,ಪ್ರಾಣಿ , ಪಕ್ಷಿ,ಎಲ್ಲರೂ ಉಗ್ರವಾಗಿ ಪ್ರತಿಭಟಿಸಿದರು..! ಕೆಂಡದ ಕೋಪ ಹೊತ್ತ ಕೆಂಪು ಮುಖದ ರವಿ ಮುನಿಸಿಕೊಂಡು ಪಶ್ಚಿಮ ದಿಕ್ಕಿನಲ್ಲಿ ಕಾಣೆಯಾದನು..!

----------------------------------

ನೋಂದಣಿ ಐಡಿ : KPF-S1-7126

1
Total Votes
9
Average Hits & Impressions
1 Year
Since posted

ಮತದಾನ ಮುಕ್ತಾಯವಾಗಿದೆ - Voting Closed!