ಕನ್ನಡಿಗರ ಮನಮನಗಳಲಿ.....!!
ರಚನೆ : ಶ್ರೀಮತಿ ಶಾರದಾ ಶ್ರಾವಣಸಿಂಗ್ ರಜಪೂತ.
----------------------------------
ಕಟ್ಟೋಣ ನಾವು ನವಕನ್ನಡನಾಡು ಸ್ವಾಭಿಮಾನದ ಇಟ್ಟಿಗೆಗಳ ಮೇಲೆ 'ಇಲ್ಲದ್ದರ' ಚಿಂತೆ ಮಾಡಬೇಕಿಲ್ಲ 'ಇದ್ದದ್ದನ್ನು' ಬೆಳೆಸಿ ಉಳಿಸುವ ಸೊಲ್ಲ ಬಿತ್ತೋಣ ಕನ್ನಡಿಗರ ಮನಮನಗಳಲಿ! ಹರಿದು ಬರುತಿರುವ ಕೊಳೆನೀರ ಕುಡಿದು ಕೊಳೆಯುತಿದೆ ಇಂದು ಕನ್ನಡ ಕಲ್ಪವೃಕ್ಷ ಎಳೆನೀರಿನ ಸಿಹಿಯಾಮೃತದ ಅರಿವಿಲ್ಲದ 'ಮನ'ಗಳ ಕೊಚ್ಚಿ ಅಳಿಸುವ ಕಾಯಕ ಬಿತ್ತೋಣ ಕನ್ನಡಿಗರ ಮನಮನಗಳಲಿ! ಸಾಯುತಿರುವ ಕನ್ನಡ ಬೇರಿಗೆ ಬೇಕಿಲ್ಲ ಕಾವಲುಸಮಿತಿ,ಅದಕ್ಕಿಷ್ಟು ಸೈನಿಕರು! ಎದೆಯಾಂತರಾಳದಿಂದ ಪುಟಿವ ನಮ್ಮ ನನ್ನದೆನ್ನುವ ಬೀಜಾಸುರ ಬಲದ ಕಿಡಿ ಬಿತ್ತೋಣ ಕನ್ನಡಿಗರ ಮನಮನಗಳಲಿ!
----------------------------------
ನೋಂದಣಿ ಐಡಿ : KPF-S1-6284
