ಅವಳ ನೆನಪಿನಲಿ
ರಚನೆ : ಬಸವರಾಜ್ ದಿದ್ದಿಗಿ
----------------------------------
ನಿನ್ನದೇ ನೆನಪಲ್ಲಿ ಇನ್ನೂ, ನಾ ....ಕಾದಿರುವೆ ಮೊನ್ನೆಯ ಕ್ಷಣಗಳ ನೆನೆಯುತಿರುವೆ ಇನ್ನೇಕೆ ನೀ ..ದೂರವಿರುವೆ ಮರೆತಿರುವೆಯ ಆ ಮಧುರ ನೆನಪುಗಳ ಕಣ್ಣೆದುರು ಕಾಣದಿದ್ದರೂ ಕಣ್ ತುಂಬಾ ನೀನಿರುವೆ ಕಣ್ ಕಂಬನಿಯಲ್ಲಿ,ನಾ ಮಿಂದಿರುವೆ ಕರವ ನೀಡೆಯ ಈ ಪ್ರೀತಿ ಕುರುಡನಿಗೆ ಕುರುಡಾಯಿತೆ ಈ ನಿನ್ನ ಪ್ರೀತಿಯೂ ಕೊನೆಗೆ ಮುನಿಸು ಏತಕೆ ಈ ನನ್ನ ಮಧುರ ಪ್ರೀತಿಗೆ ಮರಗುಳಿ ಯಾಗುವೆಯ ಆ ಒಂದು ಗಳಿಗೆಗೆ ಮತ್ತೆ ಮೋಹಿಸುವೇನು ನಿನ್ನ ಅಡಿಗಡಿಗೆ ಮರಳಿ ಒಪ್ಪಿಸುವೇನು ನನ್ನ ಪ್ರೀತಿಯನು ನಿನ್ನ ಕೊರಳಿಗೆ.
----------------------------------
ನೋಂದಣಿ ಐಡಿ : KPF-S1-6260
